ಮನೆ ಸುದ್ದಿ ಜಾಲ ಕನಸುಗಾರರ ಕನಸು ಈ “ಕನಸು ಕ್ರಿಯೇಷನ್ಸ್”. ಸುಂದರ ಲೋಕದ ಬಣ್ಣ ಬಣ್ಣದ ಕನಸುಗಳ ಹೊತ್ತು ಸಾಧನೆಯ...

ಕನಸುಗಾರರ ಕನಸು ಈ “ಕನಸು ಕ್ರಿಯೇಷನ್ಸ್”. ಸುಂದರ ಲೋಕದ ಬಣ್ಣ ಬಣ್ಣದ ಕನಸುಗಳ ಹೊತ್ತು ಸಾಧನೆಯ ಹಾದಿಯಲ್ಲಿ ನಮ್ಮ ಈ ಕನಸುಗಾರನ ತಂಡ . .

0

.

ನಮ್ಮ ತಂಡ ಕಂಡ ಕನಸನ್ನು ನನಸು ಮಾಡಿಕೊಳ್ಳುವ ದಿಟ್ಟ – ಛಲಮಲ್ಲರು. ಹಲವಾರು ಏಳು ಬೀಳುಗಳ ನಡುವೆ ಮುನ್ನುಗ್ಗುತ್ತಾ ಸಾಧನೆಯ ಹಾದಿಯನ್ನು ಹಿಡಿದ ಬಲಾಢ್ಯ ಸೈನ್ಯ ನಮ್ಮದ್ದು. ಸಮಾಜದ ಒಳಿತಿಗಾಗಿ, ನೊಂದ ಜನರ ರಕ್ಷಣೆಗಾಗಿ, ಭ್ರಷ್ಟರಿಗೆ ದುಸ್ವಪ್ನವಾಗಿ, ತಮ್ಮ ಸೇವೆಯನ್ನು ಸಮಾಜದ ಒಳಿತಿಗಾಗಿ, ಶ್ರಮಿಸುತ್ತಿರುವ ಅದ್ಭುತ ಸೃಷ್ಟಿಯೇ ಈ ಕನಸು ಕ್ರಿಯೇಷನ್ಸ್. ಕನಸು ಕ್ರಿಯೇಷನ್ಸ್ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಕಾರ್ಯ ಚಟುವಟಿಕೆಗಳನ್ನು ನೀವಿಲ್ಲಿ ಕಾಣಬಹುದು.

FILE PHOTO: 3D-printed toy figurines, a syringe and a vial labelled “coronavirus disease (COVID-19) vaccine” are seen in front of India flag in this illustration taken May 4, 2021. REUTERS/Dado Ruvic/Illustration

ನಮ್ಮ ತಂಡ ತಮ್ಮ ಮೊದಲನೆಯ ಹೆಜ್ಜೆಯಾಗಿ ತನ್ನದೇ ಆದ ವೈವಿಧ್ಯತೆಯನ್ನು, ವೈಶಿಷ್ಟತೆಯನ್ನು ಒಳಗೊಂಡ ಸವಾಲ್ ಪತ್ರಿಕೆಯ ಮೂಲಕ ಏಳು ವರ್ಷಗಳ ಹಿಂದೆ ರೂಪುಗೊಂಡಿತು. ಪಾಕ್ಷಿಕ ಪತ್ರಿಕೆಯಾದ ಸವಾಲ್ ಹುಟ್ಟಿನಿಂದಲೇ ಹದಿನಾರು ಪುಟಗಳಿಂದ ರೂಪುಗೊಂಡು ನಮ್ಮೇಲ್ಲರ ಕನಸಿನಂತೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಭ್ರಷ್ಟರನ್ನು ಬೆತ್ತಲು ಮಾಡಿ, ನೊಂದ ಅಮಾಯಕರಿಗೆ ದಾರಿ ದೀಪವಾಗಿ, ಹಲವಾರು ಏಳು ಬೀಳುಗಳ ನಡುವೆ ಸವಾಲ್ ಪತ್ರಿಕೆಯು ಭಾರಿ ಸವಾಲುಗಳನ್ನು ಎದುರಿಸಿ ಇಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ನಿಮ್ಮೆಲ್ಲರ ಮನಗೆದ್ದಿದೆ.

ಕನಸುಗಳೊಡನೆ ಬದುಕುತ್ತಿರುವ ತಂಡದ ಎರಡನೇ ಹೆಜ್ಜೆಯಾಗಿ ಸವಾಲ್ ಪತ್ರಿಕೆಯ ಪ್ರತಿರೂಪವಾಗಿ ಸವಾಲ್ ಟಿವಿ ದೃಶ್ಯ  ಮಾಧ್ಯಮದಲ್ಲಿ ತನ್ನ ಛಾಪನ್ನು ಮೂಡಿಸಲು ರೂಪುಗೊಳ್ಳುತ್ತಿದೆ. ಜನರಿಗಾಗಿ, ಜನರಿಗೋಸ್ಕರ ನಾನಾ ಬಗೆಯ ಮನರಂಜನೆಯ ಕಾರ್ಯಕ್ರಮಗಳನ್ನು, ಮುದುಡಿರುವ ಕಲೆಗಳನ್ನು ಅರಳುವಂತಾಗಿಸಲು, ಸಂಸ್ಕೃತಿಯೇ ಜೀವಾಳ ಎಂಬ ಧ್ಯೇಯದೊಂದಿಗೆ ಸಾರ್ವಜನಿಕರ ದನಿಯಾಗಲು ಹೊರಟಿರುವ ಸವಾಲ್ ಟಿವಿ ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನು ರಂಜಿಸಲಿದೆ.

ಜೀವನ ಪಯಣದಂತಿಮದಲ್ಲಿ ಹಿರಿಯ ಜೀವಗಳು ತಮ್ಮವರಿಂದ ತಿರಸ್ಕೃತರಾದಾಗ ಬದುಕಲ್ಲಿ ಕತ್ತಲು ಆವರಿಸುತ್ತದೆ. ಇಂತಹ ಮುಗ್ಧ ಹಿರಿಯ ಜೀವಗಳ ಬಾಳಲ್ಲಿ ಕತ್ತಲನ್ನ ಹೋಗಲಾಡಿಸಿ ಅವರ ಬಾಳಲ್ಲಿ ಮತ್ತೊಮ್ಮೆ ಆಶಾಕಿರಣವನ್ನು ಬೆಳಗಿಸಲು ಹೊರಟ ನಮ್ಮ ಕನಸುಗಾರರ ತಂಡದ ಮತ್ತೊಂದು ಕನಸೇ ಆಶಾ ಮಂದಿರ. ನೊಂದ ಮನಗಳ ನೆಮ್ಮದಿಯ ತಾಣವೀ ಆಶಾ ಮಂದಿರ. ಹಿರಿಯ ಜೀವಗಳಿಗೆ ಭರವಸೆಯ ಆಶ್ರಯ ತಾಣವೀ ಆಶಾ ಮಂದಿರ.

ಕನಸುಗಳನ್ನು ನುಚ್ಚುನೂರು ಮಾಡುವ ರಾಕ್ಷಸರು ಅಧಿಕವಗಿರುವ ಪ್ರಜಾಪ್ರಭುತ್ವ ನಾಡಿನಲ್ಲಿ ಹಕ್ಕುಗಳ ವಂಚಿತರಿಗೇನು ಕಡಿಮೆ ಇಲ್ಲ. ಜನಸಾಮಾನ್ಯರು ಹಾಗೂ ಅವಿದ್ಯಾವಂತ ಅಮಾಯಕರು ನ್ಯಾಯ ವಂಚಿತರಾಗಿ ತಮಗೆ ಸಲ್ಲಬೇಕಾದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಒಬ್ಬ ಪ್ರಜೆಗೆ ಸಲ್ಲ ಬೇಕಾದಂತಹ ಹಕ್ಕುಗಳನ್ನು ತಿರುಗಿ ಪಡೆದುಕೊಳ್ಳಲು ಕಾನೂನಿನ ಸುವ್ಯವಸ್ಥೆಯ ಅಡಿಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯನ್ನು ರೂಪಿಸಿದ ನಮ್ಮ ತಂಡ, ನೊಂದ ಜನರಿಗೆ ನ್ಯಾಯವನ್ನು ಒದಗಿಸುವಲ್ಲಿ ತನ್ನ ಮೇಲುಗೈಯನ್ನು ಸಾಧಿಸಿದೆ.

ಹೊರನಾಡು ತಾಯಿ ಅನ್ನಪೂರ್ಣೇಶ್ವರಿಯ ಆಶೀರ್ವಾದದಿಂದ, ನಿಮ್ಮಲ್ಲರ ಸಹಕಾರದಿಂದ ಕನಸುಗಾರರ ಕನಸಾದ ಕನಸು ಕ್ರಿಯೇಷನ್ಸ್ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಲಿದೆ. ಹೀಗೆ ನಿಮ್ಮೆಲ್ಲರ ಬೆಂಬಲ ಸದಾಕಾಲ ಇರಲಿ ನಮ್ಮ ಈ ಕನಸು ಕ್ರಿಯೇಶನ್ಸ್ ತಂಡದ ಮೇಲೆ ಎಂದು ಆಶಿಸುತ್ತೇವೆ. ನಿಮ್ಮೆಲ್ಲರ ನೆರಳಾಗಿ ನಾವು . . .

ಹಿಂದಿನ ಲೇಖನಹೈಕೋರ್ಟ್ ತಪರಾಕಿ ನಂತರ ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಅಂತ್ಯ
ಮುಂದಿನ ಲೇಖನಉಳಿದೆಲ್ಲಾ ಕೊರೊನಾ ರೂಪಾಂತರಿಗಳಿಗಿಂತ ಓಮಿಕ್ರಾನ್ ವೇಗ ಹೆಚ್ಚು: ಮೋದಿ