ಮನೆ ರಾಜಕೀಯ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ ಎಂಬ ಸುಧಾಕರ್ ಹೇಳಿಕೆ: ಆರೋಪ ಸತ್ಯಕ್ಕೆ ದೂರವಾದುದು ಎಂಬ...

ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ ಎಂಬ ಸುಧಾಕರ್ ಹೇಳಿಕೆ: ಆರೋಪ ಸತ್ಯಕ್ಕೆ ದೂರವಾದುದು ಎಂಬ ಹೆಚ್.ವಿಶ್ವನಾಥ್

0

ಮೈಸೂರು: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ’ ಎಂದು ಮಾಜಿ ಸಚಿವ ಸುಧಾಕರ್ ಮಾಡಿದ್ದ ಟ್ವೀಟ್​​’ಗೆ ಎಂಎಲ್’ಸಿ ಹೆಚ್​.ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಸುಧಾಕರ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಸುಧಾಕರ್’​ಗೆ ತಿರುಗೇಟು ನೀಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೆ ಗೌರವ ಇರುತ್ತಿತ್ತು. ಸೋತು ಸುಣ್ಣ ಆದ ಮೇಲೆ ಈ ರೀತಿ ಹೇಳುತ್ತಿರುವುದು ನಗೆ ಪಾಟಲು. ಮಾಜಿ ಸಚಿವ ಸುಧಾಕರ್​ ಜೊತೆ ಬಿಜೆಪಿ ಸರ್ವನಾಶದತ್ತ ಬಂದಿದೆ. ಡಾ.ಕೆ.ಸುಧಾಕರ್​​ರನ್ನು ದುಡ್ಡು ಇಲ್ಲದ ಯುವಕ ಸೋಲಿಸಿದ್ದಾನೆ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಸುಧಾಕರ್​ ಹೇಳಬೇಕಿತ್ತು ಎಂದು ಹೇಳಿದ್ದಾರೆ.

ಸುಧಾಕರ್ ಜೊತೆ ಬಿಜೆಪಿ ಪಕ್ಷವೇ ಸರ್ವನಾಶದತ್ತ ಬಂದಿದೆ. ಈಗ ಏನೋ ಸತ್ಯ ಹೇಳುತ್ತಿದ್ದೇನೆ ಅಂತಾ ಪೋಸು ಕೊಡ್ತಿದ್ದಾರೆ. ನಿಮ್ಮನ್ನು ಯುವಕ ದುಡ್ಡು ಇಲ್ಲದವನು ಸೋಲಿಸಿದ್ದಾನೆ. ರಾಜಕಾರಣಕ್ಕೆ ಹೊಸಬ ಬರೀ ಮಾತಿನಲ್ಲೇ ಸೋಲಿಸಿದ್ದಾನೆ. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದ ವಿಚಾರ. ನಾನೇ 17 ಜನರ ನಾಯಕನಾಗಿದ್ದೇ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಹೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಲೇಖನSSC CHSL ಪರೀಕ್ಷೆಗೆ ಅಧಿಸೂಚನೆ ಪ್ರಕಟ: 1600 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಮುಂದಿನ ಲೇಖನಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿದ ಅಮೇರಿಕಾ ನ್ಯಾಯಾಲಯ