ಮನೆ ಆರೋಗ್ಯ ಬೇಸಿಗೆಯ ದಾಹ ತಣಿಸಿ, ದೇಹಕ್ಕೆ ತಂಪು ನೀಡುವ ಜ್ಯೂಸ್’ಗಳು

ಬೇಸಿಗೆಯ ದಾಹ ತಣಿಸಿ, ದೇಹಕ್ಕೆ ತಂಪು ನೀಡುವ ಜ್ಯೂಸ್’ಗಳು

0

ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ.

ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು.

ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸಾಧ್ಯ. ಯಾವೆಲ್ಲ ಪಾನೀಯ ಗಳನ್ನು ನಾವು ಬೇಸಿಗೆಯಲ್ಲಿ ಮಾಡಿಕೊಂಡು ಕುಡಿಯಬಹುದು ಎಂಬುದನ್ನು ನೋಡೋಣ ಬನ್ನಿ.

ದಾಳಿಂಬೆ ಹಣ್ಣಿನ ಜ್ಯೂಸ್

• ದಾಳಿಂಬೆ ಹಣ್ಣು ಒಂದು ಆರೋಗ್ಯಕರವಾದ ಹಣ್ಣಾಗಿದೆ. ಇದು ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಾಗಿ ಒಳಗೊಂ ಡಿದ್ದು, ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ ಲಾಭಗ ಳನ್ನು ಕೊಡುತ್ತದೆ.

• ದಾಳಿಂಬೆ ಹಣ್ಣಿನ ಬೀಜಗಳು ರಸಭರಿತವಾಗಿರುವುದ ರಿಂದ ದೇಹಕ್ಕೆ ಅದರಿಂದ ಹೆಚ್ಚು ನೀರಿನ ಅಂಶ ಸಿಗುತ್ತದೆ ಜೊತೆಗೆ ಪೌಷ್ಟಿಕ ಸತ್ವಗಳು ಸಹ ಲಭ್ಯವಾಗುತ್ತವೆ.ಹೃದಯದ ಆರೋಗ್ಯಕ್ಕೆ ದಾಳಿಂಬೆ ಹಣ್ಣು ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಸುರಕ್ಷತೆಯ ದೃಷ್ಟಿ ಯಿಂದ ನೋಡುವು ದಾದರೆ ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

• ಹಾಗಾಗಿ ಬೇಸಿಗೆಯಲ್ಲಿ ಯಾರು ಬೇಕಾದರೂ ದಾಳಿಂಬೆ ಹಣ್ಣಿನ ಜ್ಯೂಸ್ ಸೇವಿಸಬಹುದು.

ಸೌತೆಕಾಯಿ ಜ್ಯೂಸ್

• ದೇಹದ ತಾಪಮಾನವನ್ನು ತಂಪುಗೊಳಿಸುವ ಮತ್ತು ಹೆಚ್ಚು ಬಿಸಿಲಿನಿಂದ ಪಾರು ಮಾಡುವ ಇನ್ನೊಂದು ಅದ್ಭುತ ನೈಸರ್ಗಿಕ ಪಾನೀಯ ಎಂದರೆ ಅದು ಸೌತೆಕಾಯಿ ಜ್ಯೂಸ್.

• ಸೌತೆಕಾಯಿ ಜ್ಯೂಸ್ ಮಾಡುವ ಸಂದರ್ಭದಲ್ಲಿ ಸ್ವಲ್ಪ ಪುದಿನ ಹಾಕಿ ಸೇವಿಸುವುದರಿಂದ ಮತ್ತಷ್ಟು ಔಷಧೀಯ ಲಕ್ಷಣಗಳು ಸಿಗುತ್ತವೆ.

• ಆಂಟಿ ಇಂಫ್ಲಮೇಟರಿ ಗುಣಲಕ್ಷಣಗಳನ್ನು ಒಳಗೊಂ ಡಿರುವ ಸೌತೆಕಾಯಿ ಹೊಟ್ಟೆ ಉಬ್ಬರ ಸಮಸ್ಯೆಯನ್ನು ದೂರ ಮಾಡುತ್ತದೆ ಜೊತೆಗೆ ಚರ್ಮದ ಸಮಸ್ಯೆಗಳನ್ನು ದೂರ ಮಾಡುತ್ತದೆ.

• ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಸೌತೆಕಾಯಿ ಜ್ಯೂಸ್ ಕುಡಿದರೆ ಒಳ್ಳೆಯದು.

ಕಲ್ಲಂಗಡಿ ಹಣ್ಣಿನ ಜ್ಯೂಸ್

• ಕಲ್ಲಂಗಡಿ ಹಣ್ಣಿನಲ್ಲಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಾಕಷ್ಟಿದ್ದು ಮುಖ್ಯವಾಗಿ ನಮ್ಮ ಲಿವರ್ ಆರೋಗ್ಯವನ್ನು ಉತ್ತಮಪಡಿಸುವ ಅಮೈನೋ ಆಮ್ಲ ಇದರಲ್ಲಿ ಹೇರಳವಾಗಿದೆ.

• ನಮ್ಮ ಜೀರ್ಣ ಶಕ್ತಿಯನ್ನು ಅಭಿವೃದ್ಧಿಪಡಿಸಿ ಹೊಟ್ಟೆಯ ಸೆಳೆತವನ್ನು ದೂರ ಮಾಡುತ್ತದೆ.

• ಕಲ್ಲಂಗಡಿ ಹಣ್ಣು ಮತ್ತು ಪುದೀನಾ ಎಲೆಗಳನ್ನು ಹಾಕಿ ತಯಾರಿಸಿದ ಜ್ಯೂಸ್ ಅನ್ನು ರೆಫ್ರಿಜರೇಟರ್ ನಲ್ಲಿ ಇಡೀ ರಾತ್ರಿ ಇಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಒಳ್ಳೆಯದು.

ಬೀಟ್ರೂಟ್ ಜ್ಯೂಸ್

• ಬೇಸಿಗೆಕಾಲಕ್ಕೆ ಹೇಳಿ ಮಾಡಿಸಿದ ಒಂದು ಆಯುರ್ವೇದ ರೆಸಿಪಿ ಇದಾಗಿದೆ. ಇದು ನಮ್ಮ ದೇಹದ ಚೈತನ್ಯ ಹಾಗೂ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿ ಸುತ್ತದೆ.

• ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ದಾಳಿಂಬೆ ಹಣ್ಣು ಮತ್ತು ಬೀಟ್ರೂಟ್ ನಮ್ಮ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ವಿವಿಧ ಬಗೆಯ ಪೌಷ್ಟಿಕ ಸತ್ವಗಳನ್ನು ನಮಗೆ ನೀಡುತ್ತದೆ.

ನಿಂಬೆಹಣ್ಣು ಮತ್ತು ಪುದೀನಾ ಜ್ಯೂಸ್

• ನಮ್ಮ ದೇಹ ಮತ್ತು ಮನಸ್ಸನ್ನು ಪ್ರಶಾಂತಗೊಳಿಸುವ ಗುಣ ಇರುವುದು ನಿಂಬೆಹಣ್ಣಿಗೆ. ಏಕೆಂದರೆ ಇದು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹೊರಗೆ ಹಾಕುತ್ತದೆ ಮತ್ತು ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ.

• ಪುದೀನಾ ಮತ್ತು ನಿಂಬೆಹಣ್ಣಿನ ಮಿಕ್ಸ್ಡ್ ಜ್ಯೂಸ್ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿ ಸುತ್ತದೆ. ಸೌತೆಕಾಯಿ ಮತ್ತು ಪುದೀನಾ ಎಲೆಗಳನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ ಜೊತೆಗೆ ನಿಂಬೆ ಹುಳಿ ಮತ್ತು ಚಿಟಿಕೆ ಉಪ್ಪು ಹಾಕಿ ಬ್ಲೆಂಡ್ ಮಾಡಿ ಸೇವಿಸಿ.

ಪರಂಗಿ ಹಣ್ಣಿನ ಜ್ಯೂಸ್

• ದೇಹದ ಬಿಸಿಯನ್ನು ಕಡಿಮೆ ಮಾಡುವ ಇನ್ನೊಂದು ಪಾನೀಯ ಎಂದರೆ ಅದು ಪರಂಗಿ ಹಣ್ಣಿನ ಜ್ಯೂಸ್. ಇದು ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮ ಪಡಿ ಸುತ್ತದೆ ಮತ್ತು ಹೃದಯ ವನ್ನು ಆರೋಗ್ಯಕರವಾಗಿ ಕಾಪಾಡುತ್ತದೆ.

• ಪರಂಗಿ ಹಣ್ಣು ನಮ್ಮ ಅಜೀರ್ಣತೆ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ.

• ಸುಲಭವಾಗಿ ನೀವು ಇದನ್ನು ತಯಾರು ಮಾಡಿಕೊಂಡು ಕುಡಿದು ಬೇಸಿಗೆ ಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.

ಮಜ್ಜಿಗೆ

ಊಟದ ನಂತರ ಮಜ್ಜಿಗೆ ಕುಡಿಯುವ ಸಂಪ್ರದಾಯವಿದೆ. ಆಯುರ್ವೇದದಲ್ಲಿಯೂ ಕೂಡ ಮಜ್ಜಿಗೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಈ ಪಾನೀಯವನ್ನು ಹಲವಾರು ರೋಗಗಳ ವಿರುದ್ಧ ಹೋರಾಡಲು ಔಷಧಿಯಾಗಿ ಬಳಸಲಾಗುತ್ತದೆ. ಹೀಗಾಗಿ ಹೊರಗಡೆ ಸಿಗುವ ಮಸಾಲೆ ಮಜ್ಜಿಗೆಗಿಂತ ಬೇಸಿಗೆಯ ಸಮಯದಲ್ಲಿ ಮನೆಯಲ್ಲೇ ಸ್ವತಃ ನೀವೇ ಮಜ್ಜಿಗೆ ರೆಡಿ ಮಾಡಿ ಕುಡಿಯುವುದರಿಂದ, ಸಾಕಷ್ಟು ಆರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಪ್ರಿಡ್ಜ್ ನಲ್ಲಿಟ್ಟು ಮಜ್ಜಿಗೆ ಕುಡಿಯಬೇಡಿ

ಹಿಂದಿನ ಲೇಖನವಿಧವೆಯ ಮರು ವಿವಾಹದ ಆಧಾರದಲ್ಲಿ ಮೋಟಾರು ವಾಹನ ಕಾಯಿದೆ ಅಡಿ ಪರಿಹಾರ ನಿರಾಕರಿಸಲಾಗದು: ಬಾಂಬೆ ಹೈಕೋರ್ಟ್
ಮುಂದಿನ ಲೇಖನಮಂಡ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಸುಟ್ಟು ಕರಕಲಾದ 4 ಬೈಕ್’ಗಳು