ಮನೆ ಕಾನೂನು ಇಂಜಿನಿಯರಿಂಗ್‌ನ ಗೇಟ್ ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಇಂಜಿನಿಯರಿಂಗ್‌ನ ಗೇಟ್ ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

0

ನವೆದಹಲಿ: ಇಂಜಿನಿಯರಿಂಗ್‌ನಲ್ಲಿನ ಗ್ರಾಜ್ಯುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಕೋವಿಡ್‌ 3ನೇ ಅಲೆಯಿಂದಾಗಿ ಪರೀಕ್ಷೆಯನ್ನು ಮುಂದೂಡಿದರೆ ವಿದ್ಯಾರ್ಥಿಗಳಲ್ಲಿ ಅವ್ಯವಸ್ಥೆ ಹಾಗೂ ಅನಿಶ್ಚಿತತೆ ಸೃಷ್ಟಿಸುತ್ತದೆ ಎಂದು ಕೋರ್ಟ್‌ ಹೇಳಿದೆ.

ಗ್ರಾಜ್ಯುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಇಂಜಿನಿಯರಿಂಗ್‌ (ಗೇಟ್‌) ಎಂಬುದು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಮತ್ತು ದೇಶದ ಏಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳು (ಬಾಂಬೆ, ದೆಹಲಿ, ಗೌಹಾತಿ, ಕಾನ್‌ಪುರ್‌, ಮದ್ರಾಸ್‌, ರೂರ್ಕೀ ಮತ್ತು ಕರಂಗ್‌ಪುರ್‌) ಸೇರಿ ಜಂಟಿಯಾಗಿ ಈ ಪರೀಕ್ಷೆ ನಡೆಸುತ್ತವೆ.ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಅಡಿ ನಡೆಯುವ ಈ ಪರೀಕ್ಷೆ ಇಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು, ಜೊತೆಗೆ ಉನ್ನತ ಶಿಕ್ಷಣಕ್ಕೆ ವೇದಿಕೆಯಾಗಿದೆ.

ಈ ಪರೀಕ್ಷೆಯನ್ನು ನಡೆಸುವ ಒಟ್ಟು ಎಂಟು ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ‘ಗೇಟ್‌ ಕಮಿಟಿ’ ಪರೀಕ್ಷೆ ನಡೆಸುವ ಮತ್ತು ಫಲಿತಾಂಶ ಪ್ರಕಟಿಸುವ ಜವಾಬ್ದಾರಿ ಹೊತ್ತಿರುತ್ತದೆ.