ಮನೆ ಮನರಂಜನೆ ‘ಪುಷ್ಪ 2’ ಚಿತ್ರದ ‘ಸೂಸೇಕಿ’  ಹಾಡು ಬಿಡುಗಡೆ

‘ಪುಷ್ಪ 2’ ಚಿತ್ರದ ‘ಸೂಸೇಕಿ’  ಹಾಡು ಬಿಡುಗಡೆ

0

ಬಹುನಿರೀಕ್ಷಿತ ‘ಪುಷ್ಪ 2’  ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಮೊದಲ ಸಿನಿಮಾದಲ್ಲಿ ಪುಷ್ಪ, ಶ್ರೀವಲ್ಲಿಯ ಅಂದ ಹೊಗಳಿ ‘ನಿನ್ನ ನೋಡುತಲಿದ್ರೆ ಕಣ್ಣಿನ ನೋಟ ತಿರುಗಿಸಿ ಬಿಡುವೆ’ ಎಂದು ಹಾಡಿದ್ದ, ‘ಪುಷ್ಪ 2’ ಈಗ ಶ್ರೀವಲ್ಲಿ, ಪುಷ್ಪನ ವ್ಯಕ್ತಿತ್ವ ಹೊಗಳಿ ಹಾಡು ಹಾಡಿದ್ದಾಳೆ. ಇಂದು ಬಿಡುಗಡೆ ಆಗಿರುವ ವಿಡಿಯೋ ಹಾಡಿನಲ್ಲಿ, ಶ್ರೀವಲ್ಲಿ, ತನ್ನ ಪತಿ ಪುಷ್ಪನನ್ನು ಹೇಗೆ ನೋಡುತ್ತಾಳೆ, ಹಾಗೂ ಆಕೆಯ ದೃಷ್ಟಿಕೋನ ಸಮಾಜದ ದೃಷ್ಟಿಕೋನದಿಂದ ಸಂಪೂರ್ಣ ಭಿನ್ನವಾಗಿ ಹೇಗಿದೆ ಎಂಬುದನ್ನು ಸಾರುತ್ತಿದೆ.  

Join Our Whatsapp Group

 ಶ್ರೀವಲ್ಲಿ’ ಹಾಡಿನಂತೆಯೇ ಈಗ ಬಿಡುಗಡೆ ಆಗಿರುವ ‘ಸೂಸೇಕಿ’ (ದಿ ಕಪಲ್ ಸಾಂಗ್) ನಲ್ಲಿ ಮೆದುವಾದ ಸಂಗೀತವನ್ನು ದೇವಿಶ್ರೀಪ್ರಸಾದ್ ನೀಡಿದ್ದಾರೆ.

‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪ್ರತಿ ಹಾಡಿಗೂ ಒಂದೊಂದು ಭಿನ್ನವಾದ ‘ಹುಕ್ ಸ್ಟೆಪ್’ಗಳಿದ್ದವು ಹಾಗೆಯೇ ಈ ಹಾಡಿಗೂ ಒಂದು ಹುಕ್ ಸ್ಟೆಪ್ ಅನ್ನು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸೃಷ್ಟಿಸಿದ್ದಾರೆ.

ಈಗ ಬಿಡುಗಡೆ ಆಗಿರುವ ಲಿರಿಕಲ್ ವಿಡಿಯೋನಲ್ಲಿ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿದ ಹಾಡನ್ನು ತೋರಿಸಲಾಗಿಲ್ಲ, ಬದಲಿಗೆ ಹಾಡಿನ ಚಿತ್ರೀಕರಣ ನಡೆಯುವ ಮುನ್ನ ಅಲ್ಲು ಅರ್ಜುನ್, ರಶ್ಮಿಕಾ ಸೇರಿದಂತೆ ಇತರೆ ಕಲಾವಿದರು ಮಾಡಿರುವ ತರಬೇತಿಯ ದೃಶ್ಯಗಳ ವಿಡಿಯೋ ತುಣುಕುಗಳನ್ನು ನೀಡಲಾಗಿದೆ.

 ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ನಿರ್ದೇಶಕ ಸುಕುಮಾರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇನ್ನೂ ಕೆಲವು ತಂತ್ರಜ್ಞರು ಸಹ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಈ ಹಾಡಿಗೆ ಸಾಹಿತ್ಯ (ತೆಲುಗು) ಬರೆದಿರುವುದು ಆಸ್ಕರ್ ವಿಜೇತ ಚಂದ್ರಭೋಸ್. ಕನ್ನಡ ವರ್ಷನ್ ಬರೆದಿರುವುದು ವರದರಾಜು ಚಿಕ್ಕಬಳ್ಳಾಪುರ. ಹಾಡಿರುವುದು ಖ್ಯಾತ ಗಾಯಕಿ ಶ್ರೆಯಾ ಘೋಷಾಲ್. ಹಾಡು ತೆಲುಗು, ತಮಿಳು, ಹಿಂದಿ, ಮಲಯಾಳಂ, ಬಾಂಗ್ಲಾ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಿದೆ.

 ‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಡಾಲಿ ಧನಂಜಯ್, ಫಹಾದ್ ಫಾಸಿಲ್, ಸುನಿಲ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ, ಅಮೆರಿಕ, ಯುಎಇ, ರಷ್ಯಾ, ಜಪಾನ್​ಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

ಹಿಂದಿನ ಲೇಖನಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವೈದ್ಯೆ ಸಾವು
ಮುಂದಿನ ಲೇಖನಬ್ರಿಜ್‌ ಭೂಷಣ್ ಶರಣ್ ಸಿಂಗ್  ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರ ಸಾವು