ಮನೆ ಕ್ರೀಡೆ ಟಿ20 ವಿಶ್ವಕಪ್ ಲೋಗೊ ಅನಾವರಣ

ಟಿ20 ವಿಶ್ವಕಪ್ ಲೋಗೊ ಅನಾವರಣ

0

ಜೂನ್ 4, 2024 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ ​ಗಾಗಿ ಐಸಿಸಿ ಹೊಸ ಲೋಗೊವನ್ನು ಅನಾವರಣಗೊಳಿಸಿದೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್ ಎ ಆತಿಥ್ಯವಹಿಸಲಿರುವ ಪುರುಷರ ಟಿ20 ವಿಶ್ವಕಪ್​ ಹಾಗೂ ಬಾಂಗ್ಲಾದೇಶದಲ್ಲಿ ನಡೆಯಲಿರುವ ಮಹಿಳಾ ಟಿ20 ವರ್ಲ್ಡ್​ ಕಪ್ ​ಗಾಗಿ ಒಂದೇ ವಿನ್ಯಾಸದ ಲೋಗೊವನ್ನು ಬಳಸಿರುವುದು ವಿಶೇಷ.

ಇನ್ನು ಈ ಲೋಗೊದಲ್ಲಿ ಬ್ಯಾಟ್, ಬಾಲ್ ಮತ್ತು ಎನರ್ಜಿಯನ್ನು ಸಂಕೇತಿಸುವ ಚಿಹ್ನೆಗಳನ್ನು ಬಳಸಲಾಗಿದ್ದು, ಈ ಲೋಗೊ ವಿನ್ಯಾಸದ ಅನವಾರಣದ ವಿಡಿಯೋವನ್ನು ಐಸಿಸಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಟಿ20 ವಿಶ್ವಕಪ್​ ನಲ್ಲಿ ಕಣಕ್ಕಿಳಿಯುವ ತಂಡಗಳು:

ಭಾರತ

ಅಫ್ಘಾನಿಸ್ತಾನ್

ಆಸ್ಟ್ರೇಲಿಯಾ

ಬಾಂಗ್ಲಾದೇಶ್

ಕೆನಡಾ

ಇಂಗ್ಲೆಂಡ್

ಐರ್ಲೆಂಡ್

ನಮೀಬಿಯಾ

ನೇಪಾಳ

ನೆದರ್ಲ್ಯಾಂಡ್ಸ್

ನ್ಯೂಝಿಲೆಂಡ್

ಒಮಾನ್

ಪಾಕಿಸ್ತಾನ್

ಪಪುವಾ ನ್ಯೂಗಿನಿಯಾ

ಸ್ಕಾಟ್ಲೆಂಡ್

ಸೌತ್ ಆಫ್ರಿಕಾ ಆಫ್ರಿಕಾ

ಶ್ರೀಲಂಕಾ

ಉಗಾಂಡ

ಯುಎಸ್​ ಎ

ವೆಸ್ಟ್ ಇಂಡೀಸ್.

ಯಾವಾಗ ಪ್ರಾರಂಭ?

ಜೂನ್ 4, 2024 ರಿಂದ ಜೂನ್ 30 ರವರೆಗೆ ಟಿ20 ವಿಶ್ವಕಪ್​ ಜರುಗಲಿದೆ. 20 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳನ್ನಾಡಲಾಗುತ್ತದೆ.