ಕಾಠ್ಮಂಡು: ಮುಂದಿನ 2024 ರ ಪುರುಷರ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಏಷ್ಯಾ ವಲಯದ ಅರ್ಹತಾ ಪಂದ್ಯಗಳ ಮೂಲಕ ನೇಪಾಳ ಮತ್ತು ಒಮಾನ್ ಅರ್ಹತೆ ಪಡೆದಿವೆ.
ಏಷ್ಯಾ ವಲಯದ ಕ್ವಾಲಿಫೈಯರ್ ಕೂಟದಲ್ಲಿ ಫೈನಲ್ ತಲುಪುವ ಮೂಲಕ ನೇಪಾಳ ಮತ್ತು ಒಮಾನ್ 2024ರ ಟಿ20 ವಿಶ್ವಕಪ್ ಗೆ ಅರ್ಹತೆ ಪಡೆದಿದೆ. 2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿದೆ.
ಒಮಾನ್ ತಂಡವು ಸೆಮಿ ಫೈನಲ್ ನಲ್ಲಿ ಬಹ್ರೈನ್ ನಲ್ಲಿ ತಂಡವನ್ನು ಸೋಲಿಸಿತು. ಮತ್ತೊಂದು ಸೆಮಿ ಫೈನಲ್ ನಲ್ಲಿ ನೇಪಾಳವು ಯುಎಇ ತಂಡವನ್ನು ಸೋಲಿಸಿತು.
2024ರ ಟಿ20 ವಿಶ್ವಕಪ್ ಗೆ ಈಗಾಗಲೇ 18 ತಂಡಗಳು ತಮ್ಮ ಸ್ಥಾನಗಳನ್ನು ಅಂತಿಮಗೊಳಿಸಿವೆ. ಕೊನೆಯ ಎರಡು ಸ್ಥಾನಗಳನ್ನು ಆಫ್ರಿಕಾ ಕ್ವಾಲಿಫೈಯರ್‌ನಲ್ಲಿ ನಿರ್ಧರಿಸಲಾಗುತ್ತದೆ, ಇದು ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳಲಿದೆ.
Saval TV on YouTube