ಮನೆ ರಾಜಕೀಯ ತಾಲಿಬಾನ್ ಆಡಳಿತ ನಮ್ಮ ಕಣ್ಣೆದುರೇ ನಡೆಯುತ್ತಿದೆ: ಕಾಂಗ್ರೆಸ್

ತಾಲಿಬಾನ್ ಆಡಳಿತ ನಮ್ಮ ಕಣ್ಣೆದುರೇ ನಡೆಯುತ್ತಿದೆ: ಕಾಂಗ್ರೆಸ್

0

ಬೆಂಗಳೂರು(Bengaluru): ತಾಲಿಬಾನ್ ಆಡಳಿತ ಈಗ ನಮ್ಮಲ್ಲೇ, ಕಣ್ಣೆದುರೇ ನಡೆಯುತ್ತಿದೆ ಎಂದು ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಆದೇಶ ಹೊರಡಿಸಿದ್ದ ಹೊರಡಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿ‌ತ್ತು.

ಇದಕ್ಕೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ತಡರಾತ್ರಿ ಆದೇಶ ವಾಪಸ್ ಪಡೆದಿದೆ. ಆದಾಗ್ಯೂ ಸರ್ಕಾರದ ಧೋರಣೆಯನ್ನು ಕಾಂಗ್ರೆಸ್ ಟೀಕಿಸಿದೆ.

ಪತ್ರಿಕೆಗಳು ಬರೆಯಬಾರದು, ಪತ್ರಕರ್ತರು ಪ್ರಶ್ನೆ ಕೇಳಬಾರದು, ಜನತೆ ಪ್ರತಿಭಟಿಸಬಾರದು, ಮುಕ್ತವಾಗಿ ತಿನ್ನಬಾರದು, ಸಂಸತ್ತಿನಲ್ಲಿ ಮಾತಾಡಬಾರದು, ಕಚೇರಿಗಳಲ್ಲಿ ಚಿತ್ರೀಕರಿಸಬಾರದು, ಹಾಸ್ಯ ಮಾಡಬಾರದು, ವ್ಯಂಗ್ಯ ಚಿತ್ರ ಬಿಡಿಸಬಾರದು ಎಂಬಿತ್ಯಾದಿ ಹೇಳಿಕೆಗಳು ತಾಲಿಬಾನ್‌ನಿಂದ ಕೇಳಿಬರುತ್ತಿದ್ದವು. ಈಗ ನಮ್ಮಲ್ಲೇ ಕಣ್ಣೆದುರು ಜರುಗುತ್ತಿದೆ ಎಂದು ಕಿಡಿಕಾರಿದೆ.

ಹಿಂದಿನ ಲೇಖನಆನೇಕಲ್: ಕತ್ತು ಸೀಳಿ ಯುವಕನ ಕೊಲೆ
ಮುಂದಿನ ಲೇಖನದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳ ಸಜೀವ ದಹನ