ಮನೆ ಕ್ರೀಡೆ ಆರ್ ಸಿಬಿ ಆಟಗಾರನ ಪಾಲಾದ ಟಾಟಾ ಕಾರ್

ಆರ್ ಸಿಬಿ ಆಟಗಾರನ ಪಾಲಾದ ಟಾಟಾ ಕಾರ್

0

ಇನ್ನು ಬ್ಯಾಟಿಂಗ್ ಮೂಲಕ ಇಡೀ ಸೀಸನ್​ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್​ಮನ್ ಗಿಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್​​ ನಲ್ಲಿ 27 ವಿಕೆಟ್ ಪಡೆದ ಮೊಹಮ್ಮದ್ ಶಮಿ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.

Join Our Whatsapp Group

ಹಾಗೆಯೇ ಐಪಿಎಲ್ ಸೀಸನ್ ​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ (or 10 ಲಕ್ಷ ರೂ.)​ ಈ ಬಾರಿ ಆಲ್ ​ರೌಂಡರ್ ಆಟಗಾರನ ಪಾಲಾಗಿರುವುದು ವಿಶೇಷ.

ಹೌದು, ಸೂಪರ್ ಸ್ಟ್ರೈಕರ್ ​ಗೆ ಘೋಷಿಸಲಾಗಿದ್ದ ಟಾಟಾ ಟಿಯಾಗೊ ಇವಿ ಕಾರ್ ಆರ್ ಸಿಬಿ ತಂಡದ ಆ ಲ್​ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಪಾಲಾಗಿದೆ.

ಆರ್ ​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್​ವೆ ಲ್ ಈ ಬಾರಿ 14 ಇನಿಂಗ್ಸ್​ ಗಳಲ್ಲಿ 400 ರನ್ ಬಾರಿಸಿದ್ದರು. ಅದು ಕೂಡ 183.48 ರ ಸ್ಟ್ರೈಕ್ ರೇಟ್ ​ನಲ್ಲಿ ಎಂಬುದು ವಿಶೇಷ.

ಈ ಮೂಲಕ ಈ ಸೀಸನ್​ನ ಸೂಪರ್ ಸ್ಟ್ರೈಕರ್ ಆಗಿ ಗ್ಲೆನ್ ಮ್ಯಾಕ್ಸ್​ ವೆಲ್ ಹೊರಹೊಮ್ಮಿದ್ದಾರೆ. ಅದರಂತೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ ಅನ್ನು​ ಆರ್​ಸಿಬಿ ಆಲ್​​ ರೌಂಡರ್ ತಮ್ಮದಾಗಿಸಿಕೊಂಡಿದ್ದಾರೆ.

ಹಿಂದಿನ ಲೇಖನಭೈರತಿ ರಣಗಲ್’ ಚಿತ್ರದ ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ
ಮುಂದಿನ ಲೇಖನDRDO ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ