ಮನೆ ಸುದ್ದಿ ಜಾಲ ಭೀಕರ ದಾಳಿ: ನಾಗರಿಕರ ಜೀವ ಉಳಿಸಲು ಖೇರ್ಸನ್ ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೇನೆ

ಭೀಕರ ದಾಳಿ: ನಾಗರಿಕರ ಜೀವ ಉಳಿಸಲು ಖೇರ್ಸನ್ ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೇನೆ

0

ಕೀವ್: ಭೀಕರ ದಾಳಿ ಹಿನ್ನೆಲೆಯಲ್ಲಿ ನಾಗರಿಕರ ಜೀವ ಉಳಿಸಲು ಖೇರ್ಸನ್ ನಲ್ಲಿ ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಷ್ಯಾ ಇಂದು ಮುಂಜಾನೆಯೇ ಉಕ್ರೇನ್ ಮೇಲೆ ರಾಕೆಟ್​ ದಾಳಿ, ಕ್ಷಿಪಣಿ ದಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಹೀಗಾಗಿ ಸೈನಿಕರು ನಾಗರಿಕರ ಜೀವ ಉಳಿಸಲು ಶರಣಾಗಿದ್ದಾರೆಂದು ತಿಳಿದುಬಂದಿದೆ.

ರಷ್ಯಾ ಖೆರ್ಸನ್​​ ನಗರ , ಕೀವ್​​​, ಕಾರ್ಖೀವ್​​​​​​ ಆವರಿಸಿಕೊಂಡಿದ್ದು, ಖೇರ್ಸನ್​​​​​​ ನಗರವನ್ನು ಸುತ್ತುವರೆದಿದೆ ಎಂದು ಖೇರ್ಸನ್​​​ ರಾಜ್ಯಪಾಲರಿಂದಲೇ ಅಧಿಕೃತ ಮಾಹಿತಿ ಬಂದಿದೆ.

ಈ ನಡುವೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ. ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.

ಕೀವ್, ಕೀವ್ ಒಬ್ಲಾಸ್ಟ್, ಮೈಕೊಲೈವ್, ವೊಲಿನ್ ಒಬ್ಲಾಸ್ಟ್, ಝೈಟೊಮಿರ್, ಚೆರ್ನಿಹಿವ್, ಚೆರ್ನಿಹಿವ್ ಒಬ್ಲಾಸ್ಟ್, ಇವಾನೊ-ಫ್ರಾಂಕಿವ್ಸ್ಕ್, ಎಲ್ವಿವ್, ಚೆರ್ಕಾಸಿ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ಉಕ್ರೇನ್ ನಾಗರಿಕರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.