ಮನೆ ಅಪರಾಧ ಅಪ್ಪನ ಸಾವಿಗೆ ತವರಿಗೆ ಬಂದ ಮಗಳು ಹಣ- ಒಡವೆಗಳೊಂದಿಗೆ ನಾಪತ್ತೆ

ಅಪ್ಪನ ಸಾವಿಗೆ ತವರಿಗೆ ಬಂದ ಮಗಳು ಹಣ- ಒಡವೆಗಳೊಂದಿಗೆ ನಾಪತ್ತೆ

0

ಮೈಸೂರು: ಅಪ್ಪನ ಸಾವಿಗೆಂದು ತವರಿಗೆ ಬಂದ ಮಗಳು ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳ ಸಮೇತ ನಾಪತ್ತೆಯಾಗಿದ್ದಾಳೆ.           

Join Our Whatsapp Group

ಶಿಲ್ಪ ಎಂಬಾಕೆ ಒಡವೆ ಹಾಗೂ ನಗದು ಸಮೇತ ಪರಾರಿಯಾದವಳು. ಕೆಲವು ತಿಂಗಳ ಹಿಂದೆ ಈಕೆಯನ್ನು ಕೂಟಗಳ್ಳಿಯ ರವೀಂದ್ರ ಎಂಬವರಿಗೆ ಮದುವೆ ಮಾಡಿ ಕೊಟ್ಟಿದ್ದು, ಶಿಲ್ಪ ಆಗಾಗ ಮನೆ ಬಿಟ್ಟು ಬರುತ್ತಿದ್ದಳು.

ಏಪ್ರಿಲ್ ನಲ್ಲಿ ತಂದೆ ನಿಧನರಾದಾಗ ಹಿನಕಲ್ ತವರು ಮನೆಗೆ ಬಂದ ಈಕೆ ಏಪ್ರಿಲ್ 15ರಂದು ಪುನೀತ್ ಶೆಟ್ಟಿ ಎಂಬುವನ ಜೊತೆ ಓಡಿ ಹೋಗಿದ್ದಳು. ಏಳು ದಿನಗಳ ನಂತರ ಮರಳಿ ಮನೆಗೆ ಬಂದ ಈಕೆ ನಾನು ಮತ್ತೆ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿ ಉಳಿದುಕೊಂಡಿದ್ದು, ಬಳಿಕ ಮನೆಯಲ್ಲಿದ್ದ ಹಣ ಮತ್ತು ಒಡವೆಗಳ ಸಮೇತ ನಾಪತ್ತೆಯಾಗಿದ್ದಾಳೆ.

ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.