ಮನೆ ಸುದ್ದಿ ಜಾಲ ಬುರ್ಕಾ, ನಿಖಾಬ್​, ಹಿಜಾಬ್​​ಗಳೆಲ್ಲ ಶೋಷಣೆಯ: ತಸ್ಲೀಮಾ ನಸ್ರೀನ್​​

ಬುರ್ಕಾ, ನಿಖಾಬ್​, ಹಿಜಾಬ್​​ಗಳೆಲ್ಲ ಶೋಷಣೆಯ: ತಸ್ಲೀಮಾ ನಸ್ರೀನ್​​

0

ಢಾಕಾ: ಹಿಜಾಬ್​, ಬುರ್ಖಾ ಮತ್ತು ನಿಖಾಬ್​​ಗಳೆಲ್ಲ ಶೋಷಣೆಯ ಸಂಕೇತಗಳು ಎಂದು ಬಾಂಗ್ಲಾದೇಶಿ ಲೇಖಕಿ  ತಸ್ಲೀಮಾ ನಸ್ರೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಜಾಬ್​ ಗಲಾಟೆಯೆ ಸದ್ಯ ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದು,  ಅಂತಾರಾಷ್ಟ್ರೀಯ ಮಟ್ಟದಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಬೇಕು ಎಂದು ನಡೆಯುತ್ತಿರುವ ಗಲಾಟೆ​ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕು. ಶಿಕ್ಷಣದ ಹಕ್ಕು ಎಂಬುದೇ ಧಾರ್ಮಿಕ ಹಕ್ಕು ಎಂದು ನಾನು ನಂಬುತ್ತೇನೆ.  ಮುಸ್ಲಿಮರಲ್ಲಿ ಕೆಲವರು ಹಿಜಾಬ್​ ತುಂಬ ಅತ್ಯಗತ್ಯವಾದ ಅಂಶ ಎಂದು ಭಾವಿಸುತ್ತಾರೆ. ಆದರೆ ಹಿಜಾಬ್​ ಅಷ್ಟೆಲ್ಲ ಮುಖ್ಯ ಅಂಶವಲ್ಲ ಎಂದಿದ್ದಾರೆ.

ಇದು 21ನೇ ಶತಮಾನ. ಇಲ್ಲಿ ಮಹಿಳೆಯರಿಗೆ ಎಲ್ಲ ರೀತಿಯ ಸಮಾನತೆ ಸಿಕ್ಕಿದೆ. ಈಗ ಹಿಜಾಬ್​, ನಿಖಾಬ್​, ಬುರ್ಕಾಗಳೆಲ್ಲ ಶೋಷಣೆಯ ಸಂಕೇತಗಳಾಗಿವೆ. ಇವು ಮಹಿಳೆಯರು ಮತ್ತು ಪುರುಷರಿಗೆ ಅವಮಾನ ಮಾಡುವ ವಸ್ತುಗಳಾಗಿವೆ ಎಂದೂ ಲೇಖಕಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಜಾತ್ಯತೀತ ರಾಷ್ಟ್ರ . ವಿದ್ಯಾರ್ಥಿಗಳು ಧರ್ಮಕ್ಕಿಂತಲೂ ಶಿಕ್ಷಣ ಮುಖ್ಯವೆಂಬ ಭಾವನೆ ಬೆಳೆಸಿಕೊಳ್ಳಬೇಕು. ಧಾರ್ಮಿಕ ನಂಬಿಕೆಗಳು, ಆಚರಣೆಗಳು ಖಂಡಿತ ತಪ್ಪಲ್ಲ. ಆದರೆ ಅದನ್ನು ಶಿಕ್ಷಣ ಸಂಸ್ಥೆಗಳಿಂದ ಆಚೆಗೆ, ಮನೆಯಲ್ಲಿ ಇಟ್ಟುಕೊಂಡರೆ ಸಾಕು. ವ್ಯಕ್ತಿ ತನ್ನ ಗುರುತನ್ನು ಧರ್ಮದೊಂದಿಗೆ ನಂಟು ಹಾಕಿಕೊಳ್ಳಬಾರದು ಎಂದು ಹೇಳಿದ್ದಾರೆ.

ಹಿಂದಿನ ಲೇಖನಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ಬಜೆಟ್ ನಲ್ಲಿ 1000 ಕೋಟಿ ಅನುದಾನ
ಮುಂದಿನ ಲೇಖನನೇಣಿಗೆ ಶರಣಾದ ರೈತ ಮುಖಂಡ; ಕೊಲೆ ಶಂಕೆ