ಮನೆ ಅಪರಾಧ ತಂದೆಯಿಂದಲೇ ಮಗನ ಅಪಹರಣ:ದೂರು ದಾಖಲು

ತಂದೆಯಿಂದಲೇ ಮಗನ ಅಪಹರಣ:ದೂರು ದಾಖಲು

0

ಮೈಸೂರು: ಸ್ವಂತ ಮಗನನ್ನು ತಂದೆಯೇ ಅಪಹರಣ ಮಾಡಿದ್ದಾರೆಂದು ಆರೋಪಿಸಿ ಮಗುವಿನ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.

ಜಾಫರ್ ಷರೀಫ್ ಎಂಬ ವ್ಯಕ್ತಿ ಮಗನನ್ನು ಅಪಹರಣ ಮಾಡಿದ್ದಾನೆ ಎನ್ನಲಾಗಿದ್ದು, ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ಮಗು ಅಪಹರಣ ಮಾಡಿ ಪರಾರಿಯಾಗಿದ್ದಾನೆ ಎಂದು ಆತನ ಮೊದಲ ಪತ್ನಿ ಆರೋಪಿಸಿದ್ದಾಳೆ.

ಸುಮೇರಾ ಹಾಗೂ ಜಾಫರ್ ಷರೀಫ್ ದಂಪತಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಬಳಿಕ ಜಾಫರ್ ಷರೀಫ್ ಬೇರೆ ಮದುವೆಯಾಗಿ ಮೈಸೂರಿನಲ್ಲಿ ವಾಸವಿದ್ದ. ಆದರೆ ಹುಣಸೂರಿನಲ್ಲಿರುವ ಮೊದಲ ಪತ್ನಿಯ ಜೊತೆಯಲ್ಲಿರುವ ಪುತ್ರ ಯಾಸೀನ್​ನನ್ನು ನೋಡಲು ಬಂದು, ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಆದರೆ ಇನ್ನೂ ಮಗನನ್ನು ಮನೆಗೆ ತಂದು ಬಿಟ್ಟಿಲ್ಲ. ಹೀಗಾಗಿ ನನ್ನ ಮಗನನ್ನು ಅಪಹರಣ ಮಾಡಲಾಗಿದೆ ಎಂದು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಮೇರಾ ದೂರು ದಾಖಲಿಸಿದ್ದಾರೆ.

ಹಿಂದಿನ ಲೇಖನಕೊರೊನಾ: 1335 ಹೊಸ ಕೋವಿಡ್ ಪ್ರಕರಣ ಪತ್ತೆ
ಮುಂದಿನ ಲೇಖನಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಯಲ್ಲಿ ಪಾಲ್ಗೊಂಡ ಅಮಿತ್ ಶಾ