ಇಂದೋರ್: ಸ್ವಂತ ಮಗನನ್ನು ಮಲತಾಯಿಯ ಒತ್ತಡದಿಂದ ತಂದೆಯೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಪ್ರತೀಕ್(7) ಮೃತ ಬಾಲಕ.
ಯಾವಾಗಲೂ ತನ್ನ ಅಜ್ಜ – ಅಜ್ಜಿಯೊಂದಿಗೆ ಮಲಗುತ್ತಿದ್ದ ಪ್ರತೀಕ್ ಗೆ ಭಾನುವಾರ( ಮೇ.14 ರಂದು) ಅಪ್ಪ ಶಶಿಪಾಲ್ ಮುಂಡೆ (26) ಕೂಲರ್ ಇದೆ ನನ್ನ ರೂಮ್ ಅಲ್ಲಿ ಮಲಗು ಎಂದಿದ್ದಾರೆ. ಅಪ್ಪನ ಮಾತಿಗೆ ಖುಷಿಯಿಂದ ಆಯಿತೆಂದು ಪ್ರತೀಕ್ ರೂಮ್ ಗೆ ತೆರಳಿದ್ದಾನೆ. ಮಗ ಮಲಗಿದ ಬಳಿಕ ಟಿವಿಯ ವಾಲ್ಯೂಮ್ ನ್ನು ಜಾಸ್ತಿ ಮಾಡಿ, ಮಗನ ಕತ್ತು ಹಿಸುಕಿ ಕೊಲೆಗೈದಿದ್ದಾನೆ.
ಮಗನನ್ನು ಕೊಂದ ನಂತರ, ಶಶಿಪಾಲ್ ತನ್ನ ಮೂರನೇ ಹೆಂಡತಿ ಪಾಯಲ್ಗೆ ವಾಟ್ಸಾಪ್’ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾನೆ, ಆದರೆ ಆಕೆ ಗಂಡನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದರಿಂದ ಅದನ್ನು ನೋಡಲು ಸಾಧ್ಯವಾಗಲಿಲ್ಲ. ಬಳಿಕ ಆತ ಪರಾರಿಯಾಗಿದ್ದಾನೆ.
ಶಶಿಪಾಲ್ನ ಮೂರನೇ ಹೆಂಡತಿ ಮೊದಲಿನಿಂದಲೂ ಪ್ರತೀಕ್ ಬಗ್ಗೆ ಅಸಮಾಧಾನ ಹೊಂದಿದ್ದಳು, ಈ ಬಗ್ಗೆ ಆಗಾಗ ಅವರ ನಡುವೆ ಜಗಳವೂ ನಡೆಯುತ್ತಿತ್ತು. ಆದರೆ ಈ ಅಪರಾಧಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಮಗನನ್ನು ಹತ್ಯೆ ಮಾಡಿ ಎಂದು ನಾನು ಎಂದೂ ಹೇಳಿಲ್ಲ ಎಂದು ಪಾಯಲ್ ಹೇಳಿದ್ದಾಳೆ.














