ಮನೆ ಅಪರಾಧ ಗೋ ಸಾಗಾಣೆ ಮಾಡುತ್ತಿದ್ದ ಕಂಟೇನರ್ ಪಲ್ಟಿ: 7 ಕರು ಸಾವು

ಗೋ ಸಾಗಾಣೆ ಮಾಡುತ್ತಿದ್ದ ಕಂಟೇನರ್ ಪಲ್ಟಿ: 7 ಕರು ಸಾವು

0

ಹಾಸನ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಗೋ ಸಾಗಾಣೆ ಮಾಡುತ್ತಿದ್ದ ಕಂಟೇನರ್ ಪಲ್ಟಿಯಾಗಿ 7 ಕರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಸಾವೆ ಬಳಿ ನಡೆದಿದೆ.

Join Our Whatsapp Group

ಪೊಲೀಸರು ವಾಹನವನ್ನ ಅಡ್ಡಗಟ್ಟಿದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದಾರೆ. ಈ ವೇಳೆ ಆಯ ತಪ್ಪಿ ಗೋವುಗಳಿದ್ದ ಕಂಟೇನರ್ ಪಲ್ಟಿಯಾಗಿದೆ.

ಪರಿಣಾಮ 7 ಕರುಗಳು ಸಾವನ್ನಪ್ಪಿದ್ದು, ಬಾಕಿ ಉಳಿದ 30 ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ನಿನ್ನೆ(ಮೇ.16) ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಕಂಟೇನರ್ ಪಲ್ಟಿಯಾದ ಕೂಡಲೇ ಚಾಲಕ ಎಸ್ಕೇಪ್ ಆಗಿದ್ದಾನೆ.

ಈ ಕುರಿತು ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಸುಪ್ರೀಂ ನ್ಯಾಯಮೂರ್ತಿಗಳಾಗಿ ಆಂಧ್ರ ಸಿಜೆ ಮಿಶ್ರಾ, ಹಿರಿಯ ವಕೀಲ ವಿಶ್ವನಾಥನ್ ಹೆಸರು ಶಿಫಾರಸ್ಸು ಮಾಡಿದ ಕೊಲಿಜಿಯಂ
ಮುಂದಿನ ಲೇಖನಮೂರನೇ ಪತ್ನಿಗೆ ಇಷ್ಟವಿಲ್ಲವೆಂದು ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ತಂದೆ