ಮನೆ ಕಾನೂನು ನೀಟ್​ ಪರೀಕ್ಷೆ ಅಕ್ರಮ ಪ್ರಕರಣ, ಕೌನ್ಸೆಲಿಂಗ್ ಮುಂದುವರೆಯುತ್ತೆ: ಸುಪ್ರೀಂಕೋರ್ಟ್

ನೀಟ್​ ಪರೀಕ್ಷೆ ಅಕ್ರಮ ಪ್ರಕರಣ, ಕೌನ್ಸೆಲಿಂಗ್ ಮುಂದುವರೆಯುತ್ತೆ: ಸುಪ್ರೀಂಕೋರ್ಟ್

0

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್​-ಯುಜಿ) ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ವರದಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್​ ನಿಲ್ಲಿಸಲು ನಿರಾಕರಿಸಿದೆ.

Join Our Whatsapp Group

ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನ್ಯೂನತೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್​ಟಿಎ)ಗೆ ನೋಟಿಸ್ ನೀಡಿದೆ. ವಿದ್ಯಾರ್ಥಿಗಳ ಗ್ರೇಸ್​ ಅಂಕಗಳನ್ನು ನೀಡಲಾಗುತ್ತಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್​ ಹಾಗೂ ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠವು ಜುಲೈ 8 ರಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ಪಟ್ಟಿ ಮಾಡಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಲಾಗಿದೆ ಅದಕ್ಕೆ ನಮಗೆ ಉತ್ತರಗಳು ಬೇಕು ಎಂದು ಹೇಳಿದರು.

2024ನೇ ಸಾಲಿನ ನೀಟ್​-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್​ಗೆ ಮೊರೆಹೋಗಿದ್ದಾರೆ.

2024ನೇ ಸಾಲಿನ ನೀಟ್​ ಪರೀಕ್ಷೆಯು ಕಳೆದ ತಿಂಗಳ 5 ರಂದು ನಡೆದಿತ್ತು, ದೇಶದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಹಾಗೂ ಇತರೆ ಕೋರ್ಸ್​ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಪರೀಕ್ಷೆಯನ್ನು ನಡೆಸಿತ್ತು.

ಜೂನ್​ 4ರಂದು ಪ್ರಕಟವಾದ ನೀಟ್​ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ಕೌನ್ಸೆಲಿಂಗ್​ಗೆ ತಡೆಯಾಜ್ಞೆ ನೀಡಬೇಕು ಮತ್ತು ಹೊಸದಾಗಿ ನೀಟ್​ ಯುಜಿ ಪರೀಕ್ಷೆಯನ್ನು ನಡೆಸಬೇಕು ಎಂದು ಅರ್ಜಿಗಳು ಒತ್ತಾಯಿಸಿದ್ದವು.

ನೀಟ್​ ಪರೀಕ್ಷೆ ಬರೆದ ಆಂಧ್ರಪ್ರದೇಶ ವಿದ್ಯಾರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಸಮಯದ ನಷ್ಟದ ಆಧಾರದ ಮೇಲೆ 1536 ವಿದ್ಯಾರ್ಥಿಗಳಿಗೆ ಗ್ರೇಸ್​ ಅಂಕಗಳನ್ನು ನೀಡುವ ಎನ್​ಟಿಎ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಹಿಂದಿನ ಲೇಖನಕಬ್ಬಿನ ಬಾಕಿ ಹಣ ಬಡ್ಡಿ ಸಮೇತ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಿ: ಕುರುಬೂರು ಶಾಂತಕುಮಾರ ಒತ್ತಾಯ
ಮುಂದಿನ ಲೇಖನಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾತನ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು: ಮಧ್ಯಪ್ರದೇಶ ಹೈಕೋರ್ಟ್