ಮುಂದಿನ ವಾರದಲ್ಲಿ (ಏ.3 – ಏ.8) ಎರಡು ದಿನ ಮಾತ್ರ ಕರ್ನಾಟಕ ಹೈಕೋರ್ಟ್ ಕಾರ್ಯನಿರ್ವಹಿಸಲಿದೆ.
ಸೋಮವಾರ ರಜೆಯೆಂದು ಹೈಕೋರ್ಟ್ ನ ಪ್ರಕಟಣೆ ತಿಳಿಸಿದೆ, ಮಹಾವೀರ ಜಯಂತಿಯ ಅಂಗವಾಗಿ ಮಂಗಳವಾರ ರಜೆ ಇದೆ. ಏಪ್ರಿಲ್ 7ರಂದು ಗುಡ್ ಫ್ರೈಡೇಗೆ ರಜೆ ಇರಲಿದೆ. ಎರಡನೇ ಶನಿವಾರ ರಜೆ ಇರಲಿದ್ದು, ಎಂದಿನಿಂತೆ ಭಾನುವಾರ ರಜೆ ಇರುತ್ತದೆ. ಹಾಗಾಗಿ, ಬುಧವಾರ ಮತ್ತು ಗುರುವಾರದಂದು ಮಾತ್ರ ಹೈಕೋರ್ಟ್ ಕಾರ್ಯನಿರ್ವಹಿಸಲಿದೆ.
ಏಪ್ರಿಲ್ 3ರಂದು ಘೋಷಿಸಿರುವ ರಜೆಗೆ ಬದಲಾಗಿ ಜೂನ್ 24ರಂದು ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಕ್ಕೆ ಕೆಲಸದ ದಿನವನ್ನಾಗಿ ಪರಿವರ್ತಿಸಲಾಗಿದೆ.














