ಮನೆ ಕಾನೂನು ಹಿಜಾಬ್ ವಿವಾದ; ಹೈಕೋರ್ಟ್‌ನಲ್ಲಿ 12ನೇ ದಿನದ ವಿಚಾರಣೆ ಆರಂಭ

ಹಿಜಾಬ್ ವಿವಾದ; ಹೈಕೋರ್ಟ್‌ನಲ್ಲಿ 12ನೇ ದಿನದ ವಿಚಾರಣೆ ಆರಂಭ

0

ಬೆಂಗಳೂರು: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರವೂ ಮುಂದುವರೆದಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನು ಒಳಗೊಂಡಿರುವ ಪೀಠ ಪ್ರತಿದಿನ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ಗುರುವಾರ ಕಾಲೇಜು ಆಡಳಿತ ಮಂಡಳಿ ಪರವಾಗಿ, ಕಾಲೇಜು ಪ್ರಾಂಶುಪಾಲರ ಪರವಾಗಿ ವಾದ ಮಂಡನೆ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಅವರು ಇದೇ ವಾರ ವಾದ-ಪ್ರತಿವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಗೆ ನೀಡಿರುವುದು ಸರಿಯಲ್ಲ ಎಂದು ನಿನ್ನೆ ದೇವದತ್ ವಾದ ಮಾಡಿದ್ದು, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್​ಗೆ ಅವಕಾಶ ನೀಡಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತು ಮಾಡಬೇಕು ಎಂದು ಸಿಜೆ ಮರುಪ್ರಶ್ನೆ ಮಾಡಿದ್ದರು. ಇನ್ನು ವಿದ್ಯಾರ್ಥಿನಿಯರ ಪರವಾಗಿ ಎ.ಎಂ. ಧರ್ ಕೂಡ ವಾದ ಮಂಡಿಸಿದ್ದರು. ಇಂದು 4 ಗಂಟೆವರೆಗೆ ಮಾತ್ರ ವಿಚಾರಣೆ ನಡೆಯಲಿದ್ದು, ಇಂದು ವಾದಮಂಡನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

 ಸರ್ಕಾರ, ಪ್ರತಿವಾದಿಗಳ ವಾದ ಮಂಡನೆಯನ್ನು ವಿರೋಧಿಸುತ್ತೇನೆ. ನಮಗೆ ಆತ್ಮಸಾಕ್ಷಿಯ ಆಚರಣೆಯ ಸ್ವಾತಂತ್ರ್ಯ ಇದೆ. ತಲೆಯ ಮೇಲೆ ಮಾತ್ರ ಹಿಜಾಬ್ ಧರಿಸುತ್ತಾರೆ ಎಂದು ಅರ್ಜಿದಾರರ ಪರ ಯೂಸುಫ್ ಮುಕ್ಕಲಾ ವಾದ ಮಂಡಿಸಿದರು. ನೀವು ಈ ಹಿಂದೆ ಮಾಡಿರುವ ವಾದವನ್ನೇ ಪುನರಾವರ್ತಿಸಬೇಡಿ ಎಂದು ಸಿಜೆ ಸೂಚನೆ ನೀಡಿದರು.

ಹದೀಸ್​ನಲ್ಲೂ ಕೂಡಾ ತಲೆ ಮುಚ್ಚುವ ಬಗ್ಗೆ ಹೇಳಲಾಗಿದೆ. ಮುಖವನ್ನು ಬಟ್ಟೆಯಿಂದ ಮುಚ್ಚುವ ಅಗತ್ಯವಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂಬ ವಾದ ಸರಿಯಲ್ಲ. ಎರಡೂ ಕಡೆಯವರು ಹಲವಾರು ತೀರ್ಪುಗಳನ್ನು ಕೊಟ್ಟಿದ್ದಾರೆ. ನೀವು ನಿಮ್ಮ ವಾದಗಳ ಒಂದು ಸಣ್ಣ ಟಿಪ್ಪಣಿ ನೀಡಿ. ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಯೂಸುಫ್ ಮುಕ್ಕಲಾ ವಾದ ಮಂಡನೆ ಮುಕ್ತಾಯಗೊಳಿಸಿದರು.

ಅರ್ಜಿದಾರರ ಪರ ಪ್ರೊ. ರವಿವರ್ಮಕುಮಾರ್ ವಾದಮಂಡನೆ ಆರಂಭಿಸಿದ್ದು, ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜು ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ವಾದ ಮಂಡಿಸಿದರು.

ಹಿಂದಿನ ಲೇಖನಕೋವಿಡ್ ನಿರ್ಬಂಧಗಳನ್ನು ಸಡಿಲ ಮಾಡುವಂತೆ ಕೇಂದ್ರ ಸೂಚನೆ
ಮುಂದಿನ ಲೇಖನಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; ಮೂವರ ಬಂಧನ