ಮನೆ ಅಪರಾಧ ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; ಮೂವರ ಬಂಧನ

ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು; ಮೂವರ ಬಂಧನ

0

ಬೆಂಗಳೂರುಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದು, ಬಂಧಿತರಿಂದ 80 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬಿಸ್ಕೆಟ್ ಹಾಗೂ ನೂಡಲ್ಸ್ ಬಾಕ್ಸ್ ಗಳಲ್ಲಿ ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಬಂಧಿತರನ್ನು ಶ್ರೀರಾಮಪುರದ ಮುತ್ತುರಾಜ್, ಮುಂಬೈನ ಗೌತಮ್ ಮತ್ತು ತಿರುಪತಿಯ ರಫಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಮೊದಲಿಗೆ ಮುತ್ತುರಾಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ಗಾಂಜಾವನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಈ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದು ಅವರನ್ನು 80 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.