ಮನೆ ರಾಜಕೀಯ ಹಿಜಾಬ್ ವಿವಾದ; ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಹಿಜಾಬ್ ವಿವಾದ; ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

0

ಹಾಸನ: ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಇದಕ್ಕೆ ಸರ್ಕಾರ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಹೆಚ್‍ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಒಂದು ಸಮಸ್ಯೆ ಸಣ್ಣದಾಗಿ ಆರಂಭವಾಯಿತು. ಈ ಸಮಸ್ಯೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿಯನ್ನು ತುಂಬಿಕೊಳ್ಳುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡಿದವು  ಎಂದು ಹೇಳಿದ್ದಾರೆ. ಹಿಜಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ, ಅಲ್ಲಿಯವರೆಗೂ ಹೋಗಬೇಕಿರಲಿಲ್ಲ. ಆರಂಭದಲ್ಲೇ ಬಿಜೆಪಿ, ಕಾಂಗ್ರೆಸ್ ಮುಖಂಡರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕಿತ್ತು ಎಂದು ಹೇಳಿದ್ದಾರೆ.

ಮೊದಲು ಮಂಗಳೂರು ಕೋಸ್ಟಲ್ ಬೆಲ್ಟ್‍ನಲ್ಲಿ ಇದು ಪ್ರಾರಂಭವಾಯಿತು. ಆದರೆ ಸರ್ಕಾರ ಆರಂಭದಲ್ಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿಲ್ಲ. ಒಬ್ಬರಿಗೆ ಇನ್ನೊಬ್ಬರ ಮೇಲೆ ದ್ವೇಷ, ಅದರಿಂದ ಏನೇನಾಯ್ತು. ನಾಳೆ ಹೈಕೋರ್ಟ್‍ನಲ್ಲಿ ವಿಚಾರಣೆ ಇದೆ. ನಾಳೆ ತೀರ್ಪು ಬರುತ್ತೋ, ಮುಂದೆ ಹೋಗುತ್ತೋ ನೋಡಬೇಕು. ಹೊರ ರಾಷ್ಟ್ರದ ಟಿವಿ ಚಾನೆಲ್‍ಗಳಲ್ಲಿ ಈ ವಿಚಾರ ಪ್ರಚಾರವಾಗಿದೆ. ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ. ಹೈಕೋರ್ಟ್ ಏನೇ ತೀರ್ಪು ಕೊಟ್ಟರು ಎರಡು ಗುಂಪು ಒಪ್ಪಿಕೊಳ್ಳಬೇಕು. ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ  ತೀರ್ಪು ಮೂರು ಬೆಂಚಿನ ಆಜ್ಞೆ. ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಇದಕ್ಕೆ ಸರ್ಕಾರ ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಹಿಂದಿನ ಲೇಖನಇಸ್ರೋದ ಈ ಸಾಲಿನ ಮೊದಲ ಉಡಾವಣೆ ಯಶಸ್ವಿ: ಮೂರು ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52
ಮುಂದಿನ ಲೇಖನಕೊರೊನಾ : ಇಂದು ದೇಶದಲ್ಲಿ 34,113 ಸೋಂಕು ಪ್ರಕರಣ