ಬೆಂಗಳೂರು : ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲಾ ಮಟ್ಟದ ಆಡಳಿತಾತ್ಮಕ ಪ್ರಗತಿಗೆ ಸಂಬಂಧಪಟ್ಟಂತೆ ನಾಳೆ ಮತ್ತು ನಾಡಿದ್ದು ನಿಗದಿಯಾಗಿದ್ದ ಮಹತ್ವದ “ರಾಜ್ಯ ಪ್ರಗತಿ ಪರಿಶೀಲನಾ ಸಭೆ” ಮುಂದೂಡಿಕೆಯಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ದಿನಾಂಕ ಮೇ 21 ಮತ್ತು 22ರಂದು ನಡೆಸಲು ನಿರ್ಧರಿಸಲಾಗಿತ್ತು.
ಸರ್ಕಾರದ ಪ್ರಕಟಣೆಯ ಪ್ರಕಾರ, ಮುಂದೂಡಲಾದ ಸಭೆಯು ಇದೇ ಮೇ 30 (ಶುಕ್ರವಾರ) ಮತ್ತು ಮೇ 31 (ಶನಿವಾರ) ರಂದು ನಡೆಯಲಿದೆ. ಪ್ರತಿದಿನವೂ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಈ ಸಭೆಗೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.
ಸರ್ಕಾರ ಪ್ರಕಟಣೆಯಲ್ಲಿ ಸಭೆಯ ಅಧಿಸೂಚನೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಸಭೆಗೆ ಅಗತ್ಯ ದಾಖಲೆಗಳೊಂದಿಗೆ ಅಧಿಕಾರಿಗಳು ಸಿದ್ಧರಿರಬೇಕೆಂದು ಸೂಚಿಸಲಾಗಿದೆ.















