ಮನೆ ಅಪರಾಧ ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್​ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್​ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

0

ಗಂಗಾವತಿ(ಕೊಪ್ಪಳ): ರಾತ್ರಿ ಹನ್ನೊಂದುವರೆ ಗಂಟೆಯ ಬಳಿಕ ಊಟ ಇಲ್ಲ ಎಂದು ಹೇಳಿದ್ದಕ್ಕೆ ಕುಪಿತಗೊಂಡಿರುವ ಅಪರಿಚಿತರು ಹೋಟೆಲ್​ಗೆ ಬೆಂಕಿ ಹಚ್ಚಿದ ಘಟನೆ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ.

ಊಟ ನಿರಾಕರಿಸಿದ್ದರಿಂದ ಅಸಮಧಾನಗೊಂಡ ಕಿಡಿಗೇಡಿ ಯುವಕರು ಅಡುಗೆ ಸಿಬ್ಬಂದಿಗೆ ಗೊತ್ತಾಗದಂತೆ ಕೋಣೆಯ ಹೊರಗಿನಿಂದ ಚಿಲಕ ಹಾಕಿ ಕೂಡಿಹಾಕಿದ್ದಾರೆ. ಬಳಿಕ ಹೋಟೆಲ್​ಗಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದಾರೆ. ಗುಡಿಸಲು ಮಾದರಿಯಲ್ಲಿದ್ದ ಮಂಗಳೂರು ಹೆಂಚಿನ ಹೊದಿಕೆಯ ಒಟ್ಟು 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ.

ಅಡುಗೆ ಕೋಣೆಯಲ್ಲಿ ಬಂಧಿಗಳಾಗಿದ್ದ ಸಿಬ್ಬಂದಿ ಫೋನ್ ಮೂಲಕ ಆನೆಗೊಂದಿ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿಕೊಂಡು ಬಂಧನದಿಂದ ಹೊರಬಂದಿದ್ದಾರೆ. ಬೆಂಕಿ ನಂದಿಸುವ ಹೊತ್ತಿಗಾಗಲೇ ಹೊಟೇಲ್​​ನ ಸಂಪೂರ್ಣ ಭಾಗ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಹಿಂದಿನ ಲೇಖನಬೆಂಗಳೂರು: ಶಾಲಾ ಬಸ್ ಢಿಕ್ಕಿಯಾಗಿ ಬಾಲಕಿ ಸಾವು
ಮುಂದಿನ ಲೇಖನಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಯಾವುದೇ ಕಳಂಕ ಇಲ್ಲದೇ ಹೊರಬರುತ್ತೇನೆ- ಕೆ.ಎಸ್ ಈಶ್ವರಪ್ಪ