ಯೋಗದ ನಿಯತ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ದೇಹ ಮತ್ತು ಮನಸ್ಸಿನ ಆರೋಗ್ಯಕರ ಜೀವನಶೈಲಿಯ ಅಭ್ಯಾಸವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಬೆಳಗ್ಗೆ ಯೋಗ ಮಾಡುವುದರಿಂದ ವಿಶೇಷ ಪ್ರಯೋಜನವಿದೆ.
ಪ್ರಯೋಜನಗಳು
ನಮ್ಮ ಮೊದಲ ಉಸಿರಿನ ಮರುಬಳಕೆ
ನಾವು ತೆಗೆದುಕೊಳ್ಳುವ ದಿನದ ಮೊದಲ ಉಸಿರು ಅತ್ಯಂತ ಶಕ್ತಿಯುತವಾದುದು. ದಿನವಿಡೀ ಸಕ್ರಿಯವಾಗಿರಲು, ಬದುಕಲು ಮತ್ತು ಆನಂದಿಸಲು ಸಾಕಷ್ಟು ಶಕ್ತಿ ಒದಗಿಸುವ ಗುಪ್ತ ಸಾಮರ್ಥ್ಯವನ್ನು ಇದು ಹೊಂದಿದೆ. ಬಾಹ್ಯ ಪ್ರಪಂಚಕ್ಕೆ ನಮ್ಮ ಇಂದ್ರಿಯಗಳು ಇನ್ನಷ್ಟೇ ತೆರೆದುಕೊಳ್ಳುವ ಸಮಯವದು. ಕಣ್ಣುಗಳನ್ನು ತೆರೆದು ನೋಡುವ ಮೂಲಕ ಬಾಹ್ಯ ಪ್ರಪಂಚದೊಂದಿಗಿನ ನಮ್ಮ ನಿತ್ಯದ ವಹಿವಾಟು ಶುರುವಾಗುತ್ತದೆ. ನಾವು ತೆಗೆದುಕೊಳ್ಳುವ ಮೊದಲ ಉಸಿರು ಎಂಬುದು ಕನಸು ಮತ್ತು ಎಚ್ಚರದ ಸ್ಥಿತಿಯ ನಡುವಿನ ಬಿಂದು. ನಾವು ಪ್ರಪಂಚದೊಂದಿಗೆ ಕೋ ಕ್ರಿಯೇಟ್ ಮಾಡಲು ಶುರುಮಾಡುತ್ತೇವೆ. ಈ ಮೊದಲ ಉಸಿರು ನಮ್ಮ ದಿನ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ.
ಆದ್ದರಿಂದ, “ಈ ದಿನ ನನಗೆ ಬಹಳ ಕೆಲಸ ಇದೆ”, “ನನಗೆ ಸರಿಯಾಗಿ ನಿದ್ದೆ ಬಂದಿಲ್ಲ” ಅಥವಾ “ಇಂದು ನನಗೆ ಆರೋಗ್ಯವಿಲ್ಲ” ಎಂಬ ಆಲೋಚನೆಯೊಂದಿಗೆ ನೀವು ಎಚ್ಚರಗೊಳ್ಳುತ್ತಿದ್ದರೆ, ನಿಮ್ಮ ಕಣ್ಣುಗಳನ್ನು ಮುಚ್ಚಿ – ತಿರುಗಿ, ಆಳವಾದ ಉಸಿರನ್ನು ತೆಗೆದುಕೊಳ್ಳಿ. ಆಮೇಲೆ ಎದ್ದೇಳುವುದು ಒಳಿತು. ತೆರೆದುಕೊಳ್ಳಲು ಸಿದ್ಧವಾಗಿರುವ ಪ್ರಜ್ಞೆಯೊಂದಿಗೆ, ಎಚ್ಚರಗೊಳ್ಳುವ ಸಮಯವು ನಮ್ಮ ದಿನವು ಹೇಗೆ ಇರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಈ ಶಕ್ತಿಗಳನ್ನು ಬಳಸಿಕೊಳ್ಳಲು ನಿಮ್ಮ ದಿನದ ಮೊದಲ ಗಂಟೆಯನ್ನು ಬಳಸಿ ಮತ್ತು ಉಳಿದ ಗಂಟೆಗಳನ್ನು ಅರ್ಥಪೂರ್ಣವಾಗಿ ಉತ್ಪಾದಕವಾಗಿರುವಂತೆ ನೋಡಿಕೊಳ್ಳಿ.
ದೇಹವನ್ನು ಬೆಚ್ಚಗಾಗಿಸಿ ಕಿಕ್ ಸ್ಟಾರ್ಟ್ ಮಾಡುವ ಯೋಗ
ನಾವು ಎಚ್ಚರವಾದ ಸಂದರ್ಭದಲ್ಲಿ ಶರೀರವು ವಿಶ್ರಾಂತ ಸ್ಥಿತಿಯಲ್ಲಿದ್ದು ತಂಪಾಗಿರುತ್ತದೆ. ನಾವು ಯೋಗವನ್ನು ಮಾಡಿದಾಗ, ಶರೀರವು ಶುದ್ಧೀಕರಣಕ್ಕಾಗಿ ಬಿಸಿಯಾಗುತ್ತದೆ ಮತ್ತು ಶಕ್ತಿಯ ಶಕ್ತಿಕೇಂದ್ರವಾಗಿ ರೂಪಾಂತರಗೊಳ್ಳುತ್ತದೆ. ಆಂತರಿಕ ಬುದ್ಧಿವಂತಿಕೆಗೆ ಚಾಲನೆ ನೀಡುತ್ತದೆ ಮತ್ತು ಮಾನಸಿಕ ಶಕ್ತಿ ಮತ್ತು ದೈವಿಕ ಅಂಗೀಕಾರದ ಶಕ್ತಿಯನ್ನು ಹೊರಹಾಕಲು ಮನಸ್ಸು ಸಕ್ರಿಯವಾಗುತ್ತದೆ. ದಿನವಿಡೀ ಲವಲವಿಕೆಯಿಂದ ಇರುವುದಕ್ಕಾಗಿ ಶರೀರ, ಮನಸ್ಸು ಮತ್ತು ಬುದ್ಧಿ ಎಂಬ ಮೂರು ಘಟಕಗಳನ್ನು ಬಳಸಿಕೊಳ್ಳುವ ರಹಸ್ಯ ಇದು.
ನಮ್ಮ ವೈಬ್ರೇಶನ್ ಗೆ ಒಂದು ರೂಪ ಕೊಡುತ್ತದೆ
ನಾವು ನಿದ್ರಿಸುತ್ತಿರುವಾಗಲೂ, ನಮ್ಮ ಜೀವಕೋಶಗಳು ಕಡಿಮೆ ಆವರ್ತನದಲ್ಲಿ ಕಂಪಿಸುವುದರಿಂದ ವಿಶ್ರಾಂತಿ ಪಡೆಯುವುದಿಲ್ಲ. ನಾವು ಎಚ್ಚರವಾದ ತಕ್ಷಣ, ಜೀವಕೋಶಗಳು ನಿಧಾನವಾಗಿ ತಮ್ಮ ಕಂಪನಗಳನ್ನು ಮತ್ತು ಆವರ್ತನವನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ. ಯೋಗದಂತಹ ಚಟುವಟಿಕೆಗಳ ಮೂಲಕ ನಾವು ಈ ಕಂಪನಗಳನ್ನು ಪ್ರಸಾರ ಮಾಡದಿದ್ದರೆ, ಅವು ನಮ್ಮ ಆಲೋಚನೆಗಳ ಮೂಲಕ ಚದುರಿಹೋಗಬಹುದು. ಇದು ನಮ್ಮನ್ನು ವಿವಿಧ ದಿಕ್ಕುಗಳಲ್ಲಿ ವಿಸ್ತರಿಸಿದ ಭಾವನೆ ಅಂದರೆ ನಮ್ಮ ಮನಸ್ಸು, ಶರೀರ ಮತ್ತು ಬುದ್ಧಿಯ ಏಕೀಕರಣ ಉಂಟಾಗುವುದಿಲ್ಲ. ಗೊಂದಲದ ಮನಸ್ಥಿತಿಯನ್ನು ಉಂಟುಮಾಡುತ್ತದೆ.
ಸೂರ್ಯನ ಲಯಕ್ಕೆ ತಕ್ಕಂತೆ ನಮ್ಮ ಶರೀರದ ಗಡಿಯಾರದ ಹೊಂದಾಣಿಕೆ
ನಮ್ಮ ಜೀವಕೋಶಗಳು ಬೆಳಗಿನ ಬೆಳಕಿಗೆ ತೆರೆದುಕೊಂಡಾಗ, ಅದು ನಮ್ಮ ಶರೀರದ ಕಾರ್ಯಗಳನ್ನು ಕಿಕ್ ಸ್ಟಾರ್ಟ್ ಮಾಡುತ್ತದೆ. ಕತ್ತಲೆಯಿಂದ ಬೆಳಕಿಗೆ ಮೊದಲು ಒಡ್ಡಿಕೊಂಡಾಗ, ಮೆದುಳು ಮೆಲಟೋನಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತದೆ, ಇದರಿಂದಾಗಿ ದೈಹಿಕ ಕಾರ್ಯಗಳನ್ನು ನಿರ್ದೇಶಿಸುವ ಭೌತಿಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
ಯೋಗದ ತಂತ್ರಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಉಸಿರಾಟದ ಸೌಲಭ್ಯವನ್ನು ಬಳಸಿಕೊಂಡು ನಮ್ಮ ಸ್ನಾಯುಗಳನ್ನು ಸುರಕ್ಷಿತವಾಗಿ ವಿಕಸಿಸಲು ಮತ್ತು ಸಂಕುಚಿತಗೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಮಸಲ್ ಫೈಬರ್ ಮರುಹೊಂದಿಸಲು ಮತ್ತು ಬೆಂಬಲಕ್ಕಾಗಿ ಜೋಡಣೆಯನ್ನು ಸಮತೋಲನಗೊಳಿಸುತ್ತದೆ. ಇದು ಸ್ಟ್ರೆಸ್ ಬಸ್ಟರ್ ಕೂಡ ಆಗಿದೆ.
ಮನಸ್ಸಿನ ಹೊಣೆಗಾರಿಕೆ ಮತ್ತು ನಿಯಂತ್ರಣಕ್ಕೆ ನೆರವು
ದೇಹ ಮತ್ತು ಬುದ್ಧಿಶಕ್ತಿಯ ನಡುವಿನ ಸಂವಹನ ಮಾರ್ಗಗಳು ತುಲನಾತ್ಮಕವಾಗಿ ತೆರೆದಿರುವುದರಿಂದ ಬೆಳಗಿನ ಸಮಯವನ್ನು ಮನಸ್ಸಿಗೆ ಹೆಚ್ಚು ಗ್ರಹಿಸುವ ಸಮಯ ಎಂದು ಕರೆಯಲಾಗುತ್ತದೆ. ನಾವು ಎಚ್ಚರವಾದಾಗ ಬಾಹ್ಯ ಪ್ರಚೋದಕಗಳ ಕಡೆಗೆ ತಕ್ಷಣದ ಎಳೆತವನ್ನು ವಿರೋಧಿಸಿದರೆ ಮಾತ್ರ ಇದನ್ನು ಸಾಧಿಸಬಹುದು. ಈ ವಿದ್ಯಮಾನವು ನಮ್ಮ ಮಿದುಳುಗಳು ನಮ್ಮ ಪ್ರಜ್ಞೆಗೆ ಆಜ್ಞಾಪಿಸುವ ಮೊದಲು ಮತ್ತು ನಮ್ಮ ದೇಹವನ್ನು ಆಟೊಪೈಲಟ್ ನಲ್ಲಿ ಚಲಾಯಿಸಲು ಅನುಮತಿಸುವ ಮೊದಲು ಸಂಭವಿಸುತ್ತದೆ. ಈ ನಿಶ್ಯಬ್ದ ಸಮಯದಲ್ಲಿ, ಹೊಸ ದಿನದಂತೆಯೇ, ನಾವು ಸಹ ಪುನರ್ಜನ್ಮ ಹೊಂದಿದ್ದೇವೆ. ಚಲಿಸುವ ಧ್ಯಾನಕ್ಕೆ ಇದು ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ.