ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜಿಪುಣಾಗ್ರೇಸ ಜನಾರ್ಧನ ತನ್ನ ಮನೆಯ ಗ್ರಹಪ್ರವೇಶವಾದಾಗ ಬಾಗಿಲಿಗೆ ಒಣಗಿದ ಮೂಸಂಬಿ ಕಟ್ಟಿದ….

“ಕುಂಬಳಕಾಯಿ ಕಟ್ತಾರೆ ಎಲ್ಲರೂ” ಗೆಳೆಯ ತಿಳಿ ಹೇಳಿದ.

“ ಐವತ್ತು ರೂಪಾಯಿ ದಂಡ. ತಿನ್ನುವ ಹಾಗಿಲ್ಲ, ತೆಗಿಯೋ ಹಾಗಿಲ್ಲ. ಅದಕ್ಕೆ ನಾನು ಮೂಸಂಬಿ ಕಟ್ಟಿದ್ದು.”

***

ಗಂಡ :- ನೋಡು ನಾಳೆಯಿಂದ ಹೊಸ ವರ್ಷ ಪ್ರಾರಂಭ ಆಗ್ತಿದೆ. ನಾವು ಹೇಳದ್ದನ್ನೆಲ್ಲ ಮರೆತು ಬಿಡಬೇಕು.

ಹೆಂಡ್ತಿ :- ಆಗಲ್ಲ ಕಣ್ರೀ.

ಗಂಡ :- ಯಾಕಾಗಲ್ಲ, ಮನಸ್ಸು ಮಾಡು.

ಹೆಂಡ್ತಿ :- ಹಳೇದನ್ನ ಮರಿ ಅಂದ್ರೆ ಹೇಗೆ ಮರೀಲಿ ?  ನೀವು ಎದುರಿಗೆ ಇರ್ತೀರಲ್ಲ.

***

ಗುಂಡ :- ನೀನೇ ಲಕ್ಕಿ ಕಣಯ್ಯ, ನಿನ್ನ ಹೆಂಡತಿ ಪ್ರತಿ ಹಬ್ಬಕ್ಕೂ ಸೀರೆ ಬೇಕು ಅಂತ ಡಿಮ್ಯಾಂಡ್ ಮಾಡೋದು ಬಿಟ್ಟಿದ್ದಾರಂತೆ.

ನಾಣಿ :- ಏನು ಲಕ್ಕಿನೋ, ಸೀರೆಗೆ ಡಿಮ್ಯಾಂಡ್ ಮಾಡ್ತಿಲ್ಲ. ಆದ್ರೆ ಪ್ರತಿ ಹಬ್ಬಕ್ಕೂ ಪ್ಯಾಂಟು, ಷರಟು ಬೇಕಂತೆ.

***

ಪೋಸ್ಟ್ ಮಾಸ್ಟರ್ :- ಯಾರಿಗಯ್ಯ ನೀನು ಕಾರ್ಡನ್ನು ಪೋಸ್ಟ್ ಮಾಡಲು ಹೊರಟಿದ್ದು ?

ರಂಗ :- ಓ ಇದನ್ನೇ ನನ್ನ ಹೆಂಡತಿಗೆ

ಪೋಸ್ಟ್ ಮಾಸ್ಟರ್ :- ಮತ್ತೆ ಇದೇನಿದು ಕೇವಲ ಅಡ್ರಸ್ಸು ಮಾತ್ರ ಬರೆದಿರುವೆ. ಕಾರ್ಡಿನಲ್ಲಿ ಏನು ಬರದಂತಿಲ್ಲ?

ರಂಗ :- ಹೌದು, ಏನು ಬರೆದಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಕೆಲ ಕಾಲದಿಂದ ಮಾತುಕತೆ ಇಲ್ಲ.

***

ಟೀಚರ್ :- ಮೊಟ್ಟೆಯೊಳಗಿಂದ ಮರಿ ಹೊರಗೆ ಬರುತ್ತೆ,  ಎಷ್ಟು ವಿಚಿತ್ರ ಅಲ್ವಾ?

ಬಾಲು :- ಟೀಚರ್ ವಿಚಿತ್ರ ಮೊಟ್ಟೆಯೊಳಗಿನಿಂದ ಮರಿ ಹೊರಗೆ ಬರೋದು ಅಲ್ಲ. ಅದರೊಳಗೆ ಮರಿ ಹೇಗೆ ಹೋಯಿತು ಅನ್ನೋದು !

ಹಿಂದಿನ ಲೇಖನಬೆಳಗ್ಗೆ ಯೋಗ ಮಾಡುವುದರಿಂದ ವಿಶೇಷ ಪ್ರಯೋಜನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ