ಮನೆ ಆರೋಗ್ಯ ಸಕ್ಕರೆ ಕಾಯಿಲೆ ನಿಯಂತ್ರಿಸಲು ಈ ಮೂಲಿಕೆ ಸಾಕು

ಸಕ್ಕರೆ ಕಾಯಿಲೆ ನಿಯಂತ್ರಿಸಲು ಈ ಮೂಲಿಕೆ ಸಾಕು

0

ದೀಪಾವಳಿ ಹಬ್ಬ ಮುಗಿದಿದೆ. ಭರ್ಜರಿಯಾಗಿ ಹಬ್ಬ ಮಾಡಿ ಖುಷಿಹಂಚಿಕೊಂಡಾಗಿದೆ. ಒಬ್ಬಟ್ಟು, ಕಡುಬು ಎಂದು ಹೊಟ್ಟೆ ತುಂಬುವಷ್ಟು ಸಿಹಿಯನ್ನೂ ತಿಂದಾಗಿದೆ. ಹಬ್ಬವೆನೋ ಆಚರಣೆ ಮಾಡಿಯಾಯಿತು. ಆದರೆ ಆರೋಗ್ಯವನ್ನೂ ಅದೇ ರಿತಿ ಕಾಳಜಿವಹಿಸಬೇಕಾದ ಅನಿವಾರ್ಯತೆ ಇದೆ.

ಅದರಲ್ಲೂ ಮಧುಮೇಹಿಗಳು ಹಬ್ಬದ ಖುಷಿಯಲ್ಲಿ ಸಿಹಿತಿಂದು ಪೇಚಿಗೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಮಧುಮೇಹಿಗಳ ಆರೈಕೆ

ಒಮ್ಮೆ ಬಂದರೆ ಜೀವಿತಾವಧಿಯವರೆಗೂ ಕಾಡುವ ಕಾಯಿಲೆ ಮಧುಮೇಹ. ಹೀಗಾಗಿ ಪ್ರತೀ ಹಂತದಲ್ಲಿಯೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಆಹಾರವನ್ನೇ ಸೇವನೆ, ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿರುತ್ತದೆ.

ಆದರಲ್ಲೂ ಸಿಹಿ ಪ್ರಿಯರಿಗೆ ಸಕ್ಕರೆ ಕಾಯಿಲೆ ಬಂದರಂತೂ ಅವರ ಕಷ್ಟ ಹೇಳತೀರದು. ಅಂತಹ ಸಂದರ್ಭದಲ್ಲಿ ಸಕ್ಕರೆ, ಬೆಲ್ಲದ ಬದಲು ಶುದ್ಧ ಸಿಹಿ ಅಂಶವಿರುವ ನೈಸರ್ಗಿಕ ಮೂಲಿಕೆಯನ್ನು ಬಳಸುವುದು ಒಳ್ಳೆಯದು.

ಸ್ಟಿವಿಯಾ ಗಿಡ/ ಸಿಹಿ ತುಳಸಿ

ಮಧುಮೇಹಿಗಳಗೆ ಸಿಹಿ ತಿನ್ನಬೇಕೆಂದರೆ ಈ ಸಿಹಿ ತುಳಸಿಯ ಬಳಕೆ ಬಹಳ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಸಕ್ಕರೆ ಕಾಯಿಲೆ ಇರುವವರು ಸ್ವೀಟ್ ಮಾಡುವಾಗ ಸಕ್ಕರೆಯ ಬದಲು ಈ ಸಿಹಿ ತುಳಸಿಯನ್ನು ಒಣಗಿಸಿ ಅದರ ಪುಡಿಯನ್ನು ಬಳಕೆ ಮಾಡಬಹುದು.

ಇದರಿಂದ ಆಹಾರವೂ ಸಿಹಿಯಾಗುತ್ತದೆ, ರಕ್ತದ ಸಕ್ಕರೆ ಮಟ್ಟವೂ ಏರಿಕೆಯಾಗುವುದಿಲ್ಲ. ಅಲ್ಲದೆ, ಮಧುಮೇಹಿಗಳಲ್ಲಿ ಕಾಡುವ ಇತರ ಸಮಸ್ಯೆಗಳನ್ನೂ ಕೂಡ ಈ ಒಂದು ಮೂಲಿಕೆ ನಿಯಂತ್ರಿಸುತ್ತದೆ.

ಮಧುಮೇಹಿಗಳಿಗೆ ಸಿಹಿ ತುಳಸಿ

• ಮಧುಮೇಹಿಗಳು ಪಾಯಸ, ಟೀ ಯಾವುದೇ ಸಹಿ ಪದಾರ್ಥ ತಯಾರಿಸಿ ತಿನ್ನಬೇಕೆಂದರೂ ಅದಕ್ಕೆ ಈ ಸಿಹಿ ತುಳಸಿ ಪುಡಿಯನ್ನು ಬಳಕೆ ಮಾಡಬಹುದು.

• ಇದರಲ್ಲಿ ಶೂನ್ಯ ಮಟ್ಟದಲ್ಲಿ ಕ್ಯಾಲೋರಿಗಳಿರುತ್ತದೆ. ಅಲ್ಲದೆ ಇತರ ಶುಗರ್ ಫ್ರೀ ಪದಾರ್ಥಗಳಂತೆ ಆಸಿಡಿಟಿ ಅಥವಾ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡದೆ ಆರೋಗ್ಯವಾಗಿರುವಂತೆ ಮಾಡುತ್ತದೆ.

• ಇದರ ಪುಡಿಯನ್ನು ಆಯುರ್ವೇದ ಅಂಗಡಿಗಳಲ್ಲಿ ಅಥವಾ ಆಯುರ್ವೇದ ವೈದ್ಯರ ಬಳಿ ಪಡೆದುಕೊಳ್ಳಬಹುದಾಗಿದೆ.

ಮನೆಯಲ್ಲಿಯೂ ಈ ಗಿಡ ಬೆಳೆಸಬಹುದು

ತುಳಸಿಯಂತೆ ಕಾಣುವ ಈ ಸ್ಟಿವಿಯಾ ಶುಗರ್ ಪ್ಲ್ಯಾಂಟ್ನ್ನು ಮನೆಯಲ್ಲಿಯೇ ಬೆಳೆಸಿಕೊಳ್ಳಬಹುದಾಗಿದೆ. ಇದರ ಎಲೆಯನ್ನು ಹಾಗೆಯೇ ತಿಂದರೂ ಕೂಡ ಸಕ್ಕರೆಯಷ್ಟೇ ಸಿಹಿಯಾಗಿರುತ್ತದೆ.

ಅಥವಾ ಈ ಸ್ಟಿವಿಯಾ ಗಿಡದ ಎಲೆಯನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡು ಸಿಹಿಗೆ ಬಳಸಬಹುದು.

ಆದರೆ ಈ ಸಹಿ ಅಂಶದಿಂದ ಮಧುಮೇಹ ಹೆಚ್ಚಾಗುವುದಾಗಲೀ, ಕೊಲೆಸ್ಟ್ರಾಲ್ ಮಟ್ಟ ಏರಿಕೆ ಅಥವಾ ದೇಹದ ತೂಕ ಏರಿಕೆಯಂತಹ ಸಮಸ್ಯೆಗಳು ಕಾಡುವುದಿಲ್ಲ. ಹೀಗಾಗಿ ಭಯಮುಕ್ತವಾಗಿ ಸಿಹಿ ಪದಾರ್ಥಕ್ಕೆ ಈ ಸಿಹಿ ತುಳಸಿಯನ್ನು ಮಧುಮೇಹಿಗಳು ಬಳಕೆ ಮಾಡಬಹುದು.

ಶುಗರ್ ಸಮತೋಲನದಲ್ಲಿಟ್ಟುಕೊಳ್ಳಲು…

ಸಕ್ಕರೆ ಕಾಯಿಲೆ ಹತೋಟಿಯಲ್ಲಿರಬೇಕು ಎಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರದಲ್ಲಿಡಬೇಕು. ಇದಕ್ಕಾಗಿ ನೀವು ಪ್ರತಿದಿನ ಸಿಹಿಯನ್ನು ತಿನ್ನುವ ಅಭ್ಯಾಸವನ್ನು ತಪ್ಪಿಸಬೇಕು.

ಅದರ ಬದಲು ದಿನದಲ್ಲಿ ಒಂದು ಹೊತ್ತು ತುಸು ಬೆಲ್ಲ ಹಾಕಿದ ಅಥವಾ ಸಿಹಿ ತುಳಸಿ ಬಳಸಿದ ಸಿಹಿ ಪದಾರ್ಥವನ್ನು ಸೇವನೆ ಮಾಡಬಹುದು.

ಹಿಂದಿನ ಲೇಖನಡಿಕೆಶಿ, ಸಿದ್ದರಾಮಯ್ಯ ಈಗಲೂ ಉತ್ತರ – ದಕ್ಷಿಣದಂತೆಯೇ ಇದ್ದಾರೆ: ಡಾ.ಕೆ.ಸುಧಾಕರ್
ಮುಂದಿನ ಲೇಖನಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಡಾ. ಕೆ.ವಿ ರಾಜೇಂದ್ರ ಅಧಿಕಾರ ಸ್ವೀಕಾರ