ಮನೆ ಯೋಗಾಸನ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಈ ಯೋಗಾಸನ ಸಹಕಾರಿ

ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಈ ಯೋಗಾಸನ ಸಹಕಾರಿ

0

ಮನುಷ್ಯನ ದೇಹದ ಆರೋಗ್ಯ ಉತ್ತಮವಾಗಿರಲು ಮಾನಸಿಕ ಒತ್ತಡ ನಿವಾರಣೆ ಮಾಡಿಕೊಳ್ಳಲು ಯೋಗಭ್ಯಾಸ ಒಂದು ಉತ್ತಮ ಮಾರ್ಗವಾಗಿದೆ. ಉಸಿರಾಟದ ವ್ಯಾಯಾಮಗಳು, ಯೋಗ, ಧ್ಯಾನ ಇವೆಲ್ಲವೂ ಸಹ ಅನುಕೂಲಕರ.

ಏಕೆಂದರೆ ಯೋಗ ಮಾಡುವುದರಿಂದ ವಿವಿಧ ಯೋಗ ಭಂಗಿಗಳು ದೇಹದಲ್ಲಿ ಪ್ಯಾಂಕ್ರಿಯಾಸ್ ಗ್ರಂಥಿಯನ್ನು ಹೆಚ್ಚು ಇನ್ಸುಲಿನ್ ಉತ್ಪತ್ತಿ ಮಾಡಲು ನೆರವಾಗುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ನಿರ್ವಹಣೆ ಮಾಡುತ್ತದೆ. ತಜ್ಞರು ಹೇಳುವಂತೆ ಸುಲಭವಾಗಿ ಮೂರು ಯೋಗಾಸನಗಳನ್ನು ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸೂಚಿಸಿದ್ದಾರೆ. ಅವುಗಳೆಂದರೆ…

ಪವನಮುಖಾಸನ

•       ಮೊದಲಿಗೆ ಒಂದು ಸಮತಟ್ಟಾದ ಜಾಗದಲ್ಲಿ ಬೆನ್ನಿನ ಮೇಲೆ ಮಲಗಿಕೊಳ್ಳಿ. ಕಾಲುಗಳನ್ನು ಒಟ್ಟಿಗೆ ಇಟ್ಟು ಕೊಂಡು ಕೈಗಳನ್ನು ನಿಮ್ಮ ದೇಹದ ಹಿಂಬದಿಯಲ್ಲಿ ಸೇರಿಸಿ. ದೀರ್ಘವಾದ ಉಸಿರನ್ನು ಒಳಗೆ ತೆಗೆದು ಕೊಳ್ಳಬೇಕು.

•       ಎರಡು ಮಂಡಿಗಳನ್ನು ಎದೆಯ ಭಾಗಕ್ಕೆ ತಂದು ಹೊಟ್ಟೆಗೆ ವಿರುದ್ಧವಾಗಿ ತೊಡೆಗಳನ್ನು ಒತ್ತಬೇಕು. ಈಗ ಹಿಂಬದಿ ಇರುವ ಕೈಗಳನ್ನು ಮುಂದಕ್ಕೆ ತಂದು ಎರಡು ಮಂಡಿಗಳನ್ನು ಸುತ್ತಿ ಬಳಸಿಕೊಳ್ಳಬೇಕು. ಈ ಸಂದರ್ಭ ದಲ್ಲಿ ಸಹಜವಾಗಿ ಉಸಿರಾಟ ನಡೆಸಬೇಕು.

•       ಉಸಿರನ್ನು ಹೊರಗೆ ಬಿಡುವ ಸಂದರ್ಭದಲ್ಲಿ ಎದೆಯ ಭಾಗದಲ್ಲಿ ಒತ್ತಡ ಹೆಚ್ಚಾಗುತ್ತದೆ ಮತ್ತು ಉಸಿರನ್ನು ಒಳಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಒತ್ತಡ ಕಡಿಮೆ ಯಾಗುತ್ತದೆ. ಅಕ್ಕ ಪಕ್ಕದ ಬದಿಗೆ ತಿರುಗಿ ಮೂರರಿಂದ ಐದು ಬಾರಿ ಈ ರೀತಿ ಮಾಡಬೇಕು.

ಬಾಲಾಸನ

•       ಇಲ್ಲಿ ಎರಡು ಮಂಡಿಗಳನ್ನು ಭಾಗಿಸಿ ನೆಲದ ಮೇಲೆ ಕುಳಿತುಕೊಂಡು ಕುತ್ತಿಗೆಯನ್ನು ಮತ್ತು ಬೆನ್ನಿನ ಭಾಗ ವನ್ನು ನೆಲದ ಕಡೆಗೆ ಬಾಗಿಸಬೇಕು.

•       ನಿಮ್ಮ ಎರಡು ಕೈಗಳನ್ನು ಈ ಸಂದರ್ಭದಲ್ಲಿ ಹಿಂಬದಿ ಯಲ್ಲಿ ಇಟ್ಟುಕೊಳ್ಳಬೇಕು.

•       ಸುಮಾರು 12 ರಿಂದ 15 ಸೆಕೆಂಡುಗಳು ಈ ರೀತಿ ಹಾಗೆ ಇರುವುದರಿಂದ ದೇಹ ದಲ್ಲಿ ಇನ್ಸುಲಿನ್ ಉತ್ಪತ್ತಿ ಹಾಗೂ ಸಂಚಾರ ಸಮತೋಲನಗೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಉತ್ತಮವಾಗಿ ನಿರ್ವಹಣೆ ಆಗುತ್ತದೆ.

ಸೇತುಬಂಧಸನ

•       ಒಂದು ಸಮತಟ್ಟಾದ ಜಾಗದಲ್ಲಿ ಬೆನ್ನು ಕೆಳಗೆ ಮಾಡಿ ಯೋಗ ಚಾಪೆಯ ಮೇಲೆ ಮಲಗಿಕೊಳ್ಳಬೇಕು.

•       ಮಂಡಿಗಳನ್ನು ಭಾಗಿಸಿ ಕಾಲುಗಳನ್ನು ಸೊಂಟದ ಅಳತೆಗೆ ತಕ್ಕಂತೆ ಇಟ್ಟುಕೊಂಡು, ಕೈಗಳನ್ನು ದೇಹದ ಹಿಂಬದಿಯಲ್ಲಿ ಇರಿಸಿ ಅಂಗೈಗಳು ನೆಲ ನೋಡುವಂತೆ ಇಟ್ಟುಕೊಳ್ಳಬೇಕು.

ಹೀಗೆ ಮಾಡಿ…

•       ನೆಲದ ಮೇಲೆ ಒತ್ತಡ ಹಾಕಿ ಬೆನ್ನನ್ನು ಮೇಲಕ್ಕೆ ಎತ್ತಿ ಗಲ್ಲ ಎದೆಯ ಭಾಗಕ್ಕೆ ತಾಗುವಂತೆ ಇಟ್ಟುಕೊಳ್ಳಬೇಕು. ಈ ಸಂದರ್ಭ ದಲ್ಲಿ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟ ಮೇಲೆತ್ತಬೇಕು.

•       ಕಾಲು, ಮಂಡಿ ಹಾಗೂ ತೊಡೆಗಳು ಒಂದೇ ನೇರವಾಗಿ ಇದ್ದು, ತೆಗೆದುಕೊಂಡ ಉಸಿರನ್ನು ಹಾಗೆ ಇಟ್ಟು ನಂತರ ಹೊರಗೆ ಬಿಡಬೇಕು. ಈ ರೀತಿ ಹಲವು ಬಾರಿ ಮಾಡಬೇಕು.

ಕೊನೆಯ ಮಾತು

•       ಮಧುಮೇಹ ಕಂಟ್ರೋಲ್ ಗೆ ಬರಬೇಕೆಂದರೆ, ಇಂತಹ ಯೋಗಾಸನಗಳನ್ನು ಅನುಸರಿಸುವುದರ ಜೊತೆಗೆ, ಕಟ್ಟು ನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಯಾ ವುದೇ ಕಾರಣಕ್ಕೂ ಬೆಳಗಿನ ಉಪಹಾರ ಸೇವನೆ ಮಾಡುವು ದನ್ನು ಸ್ಕಿಪ್ ಮಾಡಬಾರದು.

•       ಇನ್ನು ಸಾಧ್ಯವಾದರೆ, ಬೆಳಗಿನ ಸಮಯದಲ್ಲಿ ಯೋಗಾ ಭ್ಯಾಸಗಳ ಜೊತೆಗೆ ವ್ಯಾಯಾಮ ಮಾಡುವ ಅಭ್ಯಾಸ ಮಾಡಿ ಕೊಂಡರೆ ತುಂಬಾನೇ ಒಳ್ಳೆಯದು.

•       ಇದರಿಂದ ಆರೋಗ್ಯಕ ರವಾದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಹಾಗೂ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಕೂಡ ಹೆಚ್ಚು ಮಾಡುತ್ತದೆ.

•       ಇನ್ನು ಯಾವುದೇ ಕಾರಣಕ್ಕೂ ಕೂಡ, ಮಧುಮೇಹಿ ರೋಗಿಗಳು ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ ವೈದ್ಯರ ಬಳಿ ಪ್ರತಿ ತಿಂಗಳಿ ಗೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿ ಕೊಳ್ಳಬೇಕು.