ಮನೆ ಆರೋಗ್ಯ ತ್ರಿಪಲ

ತ್ರಿಪಲ

0

 ವೋಷಾದಿ ಧೃತ

35. ವೋಷಂ ಬಿಲ್ವಂ ಹರಿದ್ರೇ ದ್ವೇ ತ್ರಿಫಲಾ ದ್ವೇ ಪುನರ್ನವೇ |

 ಮುಸ್ತಾನ್ನ ಯೋರಜಃ ಪಾಠಾವಿಡಙ್ಗಂ ದೇವದಾರು ಚ ॥

 ವೃಶ್ಚಿಕಾಲೀ ಚ ಭಾರ್ಗಿ ಚ ಸಕ್ತಾರೈಸ್ತೈಃ ಮೈರ್ಥ್ಯು ಮ್ । ಸಾಧಯಿತ್ವಾ ಪಿಬೇದುತ್ತಾನರೋ ಮೃದೋಷ ಪೀಡಿತಃ ||

Join Our Whatsapp Group

ತ್ರಿಕಟು, ಬೆಲ್ಲ, ಅರಿಸಿನ, ಮರದರಿಸಿನ, ತ್ರಿಫಲ, ಗಣಜಲ, ಜೇಕಿನಗೆಡ್ಡೆ, ಲೋಹಭಸ್ಮ, ಆಗಳ ಶುಂಠಿ, ವಾಯು ವಿಳಂಗ, ದೇವದಾರು, ಮೇಷಶ್ಚಿಂಗಿ, ಜವಖಾರ, ಭಾರಂಗಿ ಮೂಲ ಇವುಗಳ ಸಮ ಪ್ರಮಾಣದ ಚೂರ್ಣವನ್ನು ತೆಗೆದುಕೊಂಡು, ಒಟ್ಟು ಚೂರ್ಣದ 16 ಪಾಲು ನೀರು, 4 ಪಾಲು ತುಪ್ಪ ಸೇರಿಸಿ ಘೃತವನ್ನು ಸಿದ್ಧಪಡಿಸಿ ಸೇವಿಸಿದರೆ ಪಾಂಡುರೋಗ ಗುಣವಾಗುತ್ತದೆ.

 ಅಧ್ಯಾಯ – 18

 ತೂಷಣಾದಿ ಧೃತ

36. ತೂಷಣ ತ್ರಿಫಲಾ ದ್ರಾಕ್ಷಾ ಕಾಶ್ಚರ್ಯಾಣಿ ಪರೂಪಕಮ್ |

 ದ್ವೇ ಪಾತೇ ದೇವದಾರ್ವೃದ್ಧಿಂ ಸ್ವಗುಪ್ತಾಂ ಚಿತ್ರಕಂ ಶರೀಮ್ ||

 *ವ್ಯಾಪ್ರೀಂ ತಾಮಲಕೀಂ ಮೇದಾಂ ಕಾಕನಾಸಂ ಶತಾವರೀಮ್ ।

 ತ್ರಿಕಂಟಕಂ ವಿದಾರೀಂ ಚ ಪಿಷ್ಟಾ ಕರ್ಷಸಮಾನ್ ಪ್ರತಾತ್||

*

 ಪ್ರಸ್ಥಂ ಚತುರ್ಗುಣಕ್ಕೀರೆ ಸಿದ್ಧಂ ಕಾಸಹರಂ ಪಿಬೇತ್ ।

 *ಜ್ವರ ಗುಲಾರುಚಿ ಪೀಹರೋ ಪ್ರತ್ವಾರ್ಶ್ವ ಶೂಲನುತ್ ||

*

 ಕಾಮಲಾರ್ಶೋನಿಲಾಷ್ಟ್ರೀಲಾ ಕ್ಷತಶೋಷಕ್ಷಯಾಪಹಮ್ | ಶೂಷಣಂ ನಾಮ ವಿಖ್ಯಾತಂ ಘೃತ ಮೇತದನುತ್ತಮಮ್ ||

ತ್ರಿಕಟು, ತ್ರಿಫಲ, ದ್ರಾಕ್ಷಿ, ಶಿವನೀಫಲ, ಪರೂಷಕ (ದಡಿಸಲ ಹಣ್ಣು), ಸಣ್ಣ ಮತ್ತು ದಟ್ಟ ದೊಡ್ಡ ಆಗಳಶುಂಠಿ, ದೇವದಾರು, ಋದ್ದಿ, ನಸಗುದ್ದಿ ಬೀಜ, ಚಿತ್ರಮೂಲ, ಕಚೋರ, ನೆಲಗುಳ್ಳ, ನೆಲನೆಲ್ಲಿ, ಮೇದಾ, ಕಾಕನಾಸ, ಶತಾವರಿ, ನೆಗ್ಗಿಲು, ನೆಲಗುಂಬಳ – ಇವುಗಳ ಕಲ್ಯವನ್ನು ತಲಾ 1 ತೊಲದಂತೆ ತೆಗೆದುಕೊಂಡು 4 ಭಾಗ ಹಾಲಿಗೆ 128 ತೊಲ ತುಪ್ಪ ಸೇರಿಸಿ ಘೃತಪಾಕ ತಯಾರಿಸಿ ಸೇವಿಸುವುದರಿಂದ ಕೆಮ್ಮು, ಜ್ವರ, ಗುಲ್ಮ, ಅವುಚಿ, ಸ್ವೀಹ, ತಲೆನೋವು,ಎದೆನೋವು (ಹೃದಯ ಶೂಲ), ಪಾರ್ಶ್ವಶೂಲ, ಕಾಮಾಲೆ, ಮೂಲವ್ಯಾಧಿ, ವಾತಾಷೀಲ,ಕ್ಷತಶೋಪ ಮತ್ತು ಕ್ಷಯರೋಗ ಗುಣವಾಗುತ್ತದೆ.

 ದ್ವಿಪಂಚ ಮೂಲಾದಿ ಧೃತ

 ದ್ವಿಪಂಚಮೂಲೀ ತ್ರಿಫಲಾ ಚವಿಕಾಭಾರ್ಗಿ ಚಿತ್ರಕೈ ||

 ಕುಲತೃ ಪಿಪ್ಪಲಿ ಮೂಲ ಪಾಠಾಕೋಲಯವೈರ್ಜಲೇ 1 *ಶೃತೇ ನಾಗರದುಃಸ್ಪರ್ಶ ಶಶೀಪಿಪ್ಪಲೀ ಪೌಷ್ಕರೈ: ||

 ಕಲ್ಕೈಃ ಕರ್ಕಟಶೃಙ್ಗಾೖ  ಚ ಸಮೈ: ಸರ್ಪಿವಿ್ರಪಾಚಯೇತ್ | ಸಿದ್ಧೇಸ್ಟಿಂಶೂರ್ಣಿತೌ ಕ್ಷಾರೇ ದ್ವೌ ಪಂಚಲವಣಾನಿ ಚ ||

 *ದತ್ವಾಯುಕ್ತ ಪಟೇನಾತ್ರಾಂ ಕ್ಷಯಕಾಸನಿಪೀಡಿತಃ ॥

*

ದಶಮೂಲ, ತ್ರಿಫಲ, ಚವಕ, ಗಂಟು ಭಾರಂಗಿ, ಚಿತ್ರಮೂಲ, ಹುರಳಿ, ಮೋಡಿ, ಆಗಿಲಶುಂಠಿ, ಬೋರೆ, ಜವೆಗಳ ಕಷಾಯದಲ್ಲಿ ಶುಂಠಿ, ನೆಲಇಂಗಳ, ಕಚೋರ, ಹಿಪ್ಪಲಿ, ಪುಷ್ಕರ ಮೂಲ, ಕರ್ಕಾಟಕ ಶೃಂಗಿ – ಇವುಗಳನ್ನು ಸಮ ಪ್ರಮಾಣ ತೆಗೆದುಕೊಂಡು ಕಲ್ಯ ತಯಾರಿಸಿ, ಕಲ್ಯದ ನಾಲ್ಕು ಭಾಗ ತುಪ್ಪ ಸೇರಿಸಿ ಧೃತ ತಯಾರಿಸಿ, ಯೋಗ್ಯ ಪ್ರಮಾಣದಷ್ಟ ಜವಖಾರ, ಸಜ್ಜಿಕಾರ ಮತ್ತು ಪಂಚಲವಣ ಸೇರಿಸಿದ ಘೃತ ಸೇವಿಸುವುದರಿಂದ ಕ್ಷಯ ಕಾಸರೋ ಗುಣವಾಗುತ್ತದೆ.

 ಗೂಡಾಚ್ಯಾದಿ ಧೃತ

38. *ಗುಡೂಟೀಂ ತ್ರಿಫಲಾಂ ಮೂರ್ವಾಂ ಹರಿದ್ರಾಂ ಶ್ರೇಯಸೀಂ ವಚಾಮ್ || *

 ನಿದಿಗ್ರಿಕಾಂ ಕಾಸಮಂ ಪಾಠಾಂ ಚಿತ್ರಕನಾಗರಮ್ ।

 ಜಲೇ ಚತುರ್ಗುಣೇ ಪಕ್ತ್ವ ಪಾದಶೇಷಣ ತತ್ಸಮಮ್ ॥

 *ಸಿದ್ಧ ಸರ್ಪಿಃ ವಿಬೇದ್ ಗುಲ್ಕ ಶ್ವಾಸಾರ್ತಿಕ್ಷಯ ಕಾಸಮತ್

*

         ಅಮೃತಬಳ್ಳಿ, ತ್ರಿಫಲ, ಹೆಗೊರಟಿಗೆ, ಅರಿಸಿನ, ಗಜಹಿಪ್ಪಲಿ, ಬಜೆ, ನೆಲಗುಳ್ಳ, ಆಗಿಲಶುಂತಿ, ಚಿತ್ರಮೂಲ, ಶುಂಠಿ ಇವುಗಳನ್ನು ಸಮಭಾಗ ತೆಗೆದುಕೊಂಡು 4 ಭಾಗ ನೀರಿನಲ್ಲಿ ಕುದಿಸಿ 9 ಭಾಗ ಕಷಾಯ ಉಳಿದ ನಂತರ ಅಷ್ಟೇ ಪ್ರಮಾಣದ ತುಪ್ಪವನ್ನು ಮಿಶ್ರಣ ಮಾಡಿ ತಯಾರಿಸಿದ ಗುಡೂಟ್ಯಾಡಿ ಘೃತವನ್ನು ಸೇವಿಸುವುದರಿಂದ ಗುಲ್ಮ, ಶ್ವಾಸ, ಕಾಸ ಗುಣವಾಗುತ್ತದೆ.

 ಜೀವಂತ್ಯಾದಿ ಲೇಹ್ಯ

 ಜೀವಂತೀಂ ಮಧುಕಂ ಪಾಠಾಷ್ಟಕ್ ಕ್ಷೀರೀಂ ತ್ರಿಫಲ ಶರೀಂ ||

 ಮುಸ್ಟೈಲೆ ಪಿಪ್ಪಲೀಂ ದ್ರಾಕ್ಷಾಂ ದ್ವೇ ಬೃಹತ್ಯೌ ವಿತುನ್ನಕಮ್ | ಸಾರೀವಾಂ ಪೌಷ್ಕರಂ ಮೂಲಂ ಕರ್ಕಾಟೌಖ್ಯಾಂ ರಸಾಂಜನಮ್ ||

 ಪುನರ್ನವಾಂ ಲೋಹರಜಸ್ಥಾಯಮಾಣಂ ಯಮಾನಿಕಾಮ್ |

 ಭಾರ್ಗಿಂ ತಾಮಲಕೀ ಮೃದ್ಧಿಂ ವಿಡಙ್ಗಾಂ ಧನ್ವಯಾಸಕಮ್ ॥

 ಕ್ಷಾರ ಚಿತ್ರಕ ಚವ್ಯಾಮ್ಲವೇತಸ ವೋಹದಾರು ಚ |

 ಚೂರ್ಣಕೃತೈ ಪಲಾಂಶಾನಿ ಲೇಹಯೇನ್ಮಧುಸರ್ಪಿಷಾ 11

 ಚೂರ್ಣಾತ್ ಪಾಣಿತಲಂ ಪಂಚ ಕಾಸಾನೇತದ್ ವ್ಯಪೋಹತಿ ||

       ಜೀವಂತಿ (ಸೀಹಾಲೆ), ಜೇಷ್ಠಮಧು, ಆಗಿಲಶುಂಠಿ, ವಂಶಲೋಚನ, ತ್ರಿಫಲ, ಕಚೋರ, ಜೇಕಿನ ಗೆಡ್ಡೆ, ಏಲಕ್ಕಿ, ಹಿಪ್ಪಲಿ, ದ್ರಾಕ್ಷಿ, ನೆಲಗುಳ್ಳ, ಹೆಬ್ಬಗುಳ್ಳ, ಹವೀಜ, ಆನಂತಮೂಲ, ಕರ್ಕಾಟಕ ಶ್ರಿಂಗಿ, ರಸಾಂಜನ, ಬಿಳಿ ಗಣಜಲ ಬೇರು, ಲೋಹ ಭಸ್ಮ, ತ್ರಾಯಮಾಣ, ಅಜವಾನ, ಭಾರಂಗಿ ಮೂಲ, ನೆಲನೆಲ್ಲಿ, ಋದ್ಧಿ, ವಾಯುವಿಳಂಗ, ನೆಲಇಂಗಳ, ಜವಖಾರ, ಚಿತ್ರಮೂಲ, ಚವಕ, ಆಮ್ಲವೇತಸ, ತ್ರಿಕಟು ಮತ್ತು ದೇವದಾರು ಇವುಗಳನ್ನು ತಲಾ 4 ತೊಲ ತೆಗೆದುಕೊಂಡು ಚೂರ್ಣ ಮಾಡಿ ತುಪ್ಪ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.

 ಪದ್ಮ ಕಾವಿ ಲೇಹ್ಯ

40. ಪದ್ಮಕಂ ತ್ರಿಪಲಾಂ ವೋಹಂ ವಿಡಂಗಂ ದೇವದಾರು ಚ ||

 *ಎಲಾಂ ರಾಸ್ಕಾಂಚ ತುಲ್ಯಾನಿ ಸೂಕ್ಷ್ಮ ಚೂರ್ಣಾನಿ ಕಾರಯೇತ್ |

 ಸರ್ವೈರೇಭಿಃ ಸಮಂ ಚೂರ್ಣೖಃ ಪೃಥಕ್ ಕ್ಷೌದ್ರಂ ಘೃತಂ ಸೀತಾಮ್ ।।

 ಲಿಹ್ವಾಲ್ಲೇಹಂ ವಿಮಧ್ಯೆ ತಂ ಸರ್ವಕಾಸಹರಂ ಶಿವಮ್ ।।

ಪದ್ಮ ಕಾಷ್ಠ, ತ್ರಿಫಲ, ತ್ರಿಕಟು, ವಾಯುವಿಳಂಗ, ದೇವದಾರು, ಬಲಾ, ರಾಸ್ನ ಇವುಗಳನ್ನು ಸಮ ಪ್ರಮಾಣ ತೆಗೆದುಕೊಂಡು ಪುಡಿ ಮಾಡಬೇಕು. ಪ್ರತ್ಯೇಕವಾಗಿ ಚೂರ್ಣದ ಪ್ರಮಾಣದಷ್ಟು ಜೇನು, ತುಪ್ಪ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ಎಲ್ಲಾ ವಿಧದ ಕೆಮ್ಮನ್ನು ಗುಣಪಡಿಸುತ್ತದೆ

 ಅಧ್ಯಾಯ 20

.41. ಮುದ್ದಾನ್ ಮಸೂರಾಂಶ್ಚಣಕಾನ್ ಕಲಾಯಾನ್ ಭ್ರಷಾನ್ ಯುತಾನ್ ನಾಗರಮಾಕ್ಷಿಕಾಭ್ಯಾಂ |

 ಲಿಹ್ವಾತ್ ತಥೈವ ತ್ರಿಫಲಾವಿಡಂಗ ಚೂರ್ಣಂ ವಿಡಂಗಪ್ರವಯೋ ರಸಂ ವಾ ||

       ಹುರಿದ ಹೆಸರು, ಚನ್ನಂಗಿ ಬೇಳೆ, ಕಡ್ಲೆ, ಬಟಗಡ್ಡೆಗಳ ಚೂರ್ಣವನ್ನು ಶುಂಠಿ ಜೇನಿನೊಡನೆ ಸೇವಿಸುವುದರಿಂದ ಅದೇ ರೀತಿ ತ್ರಿಫಲ ಮತ್ತು ವಾಯುವಿಳಂಗ ಚೂರ್ಣನ್ನು ಸೇವಿಸುವುದರಿಂದ ವಾಂತಿಯಾಗುವುದು ನಿಲ್ಲುತ್ತದೆ.

42. ತ್ರಿಫಲಾರಸ ಸಂಯುಕ್ತಂ ಸರ್ಪಿಸ್ವಿ ವೃತಾಯಾ ಸಹ | *ಪ್ರಯೋಕ್ತವ್ವಂ ವಿರೇಕಾರ್ಥಂ ವಿಸರ್ಪಜ್ವರ ಶಾಂತಯೇ ॥

ತ್ರಿಫಲ ರಸದಲ್ಲಿ ತುಪ್ಪ ಮತ್ತು ನಿಶೋತ್ಪರ ಚೂರ್ಣವನ್ನು ಬೆರೆಸಿ ವಿರೇಚನ ಮಾಡಿಸುವುದರಿಂದ ವಿಸರ್ಪ ಜ್ವರ (Herpes Zoster) ನಿವಾರಣೆಯಾಗುತ್ತದೆ.

43. ತ್ರಿಫಲಾ ಪದ್ಮಕೋಶೀರಂ ಸಮಂಗಾ ಕರವೀರಮ್ | ನಲಮೂಲಾನ್ಯನಂತಾ ಚ ಪ್ರದೇಪಮುಪ ಕಲಯೇತ್ ||

ತ್ರಿಪಲ, ಪದ್ಮ ಕಾಷ್ಠ, ಬಾಳದ ಬೇರು, ಮಂಜಿಷ್ಠ, ಕಣಿಗಲ, ನಳದ ಬೇರು (ಕಾಡ ಹೊಗೆಸೊಪ್ಪು, ಅನಂತಮೂಲ – ಇವುಗಳ ಚೂರ್ಣವನ್ನು ತುಪ್ಪದಲ್ಲಿ ಕಲಸಿ ಲೇಪಿಸುವುದರಿಂದ ವಿಸರ್ಪ ವಾಸಿಯಾಗುತ್ತದೆ.