ಮನೆ ಸುದ್ದಿ ಜಾಲ ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಸಫಾರಿ ಜೋನ್‌ನಲ್ಲಿ ರಾಜಹುಲಿ ದರ್ಶನ

ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಸಫಾರಿ ಜೋನ್‌ನಲ್ಲಿ ರಾಜಹುಲಿ ದರ್ಶನ

0

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಸಫಾರಿ ತೆರಳಿದ್ದ ಪ್ರವಾಸಿಗರಿಗೆ ರಾಜಹುಲಿ ದರ್ಶನವಾಗಿದ್ದು, ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ
ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಕೆ.ಗುಡಿ ಸಫಾರಿ ಜೋನ್ ನಲ್ಲಿ ಹೆಚ್ಚಾಗಿ ಹುಲಿಗಳ ಸಂಚಾರವಾಗುತ್ತಿದೆ.
ಪ್ರತಿನಿತ್ಯ ಪ್ರವಾಸಿಗರಿಗೆ ದರ್ಶನ ನೀಡುತ್ತಿರುವ ರಾಜಹುಲಿಯನ್ನು ಕಂಡ ಪ್ರವಾಸಿಗರು ಪುಳಕಿರಾಗಿದ್ದಾರೆ. ಕೆ ಗುಡಿ ಸಫಾರಿ ಜೋನ್ ನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಫಾರಿಗೆ ಆಗಮಿಸುತ್ತಿದ್ದಾರೆ.

ಹಿಂದಿನ ಲೇಖನಅಕ್ರಮವಾಗಿ ಸಾಗಿಸುತಿದ್ದ ಅನ್ನಭಾಗ್ಯ ಅಕ್ಕಿ ವಶ
ಮುಂದಿನ ಲೇಖನದಿ ಮೈ ಷುಗರ್ ಕಾರ್ಖಾನೆ  ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನ: ಸಚಿವ ಶಂಕರ್.ಬ.ಪಾಟೀಲ