ಮನೆ ಅಪರಾಧ ಅಕ್ರಮವಾಗಿ ಸಾಗಿಸುತಿದ್ದ ಅನ್ನಭಾಗ್ಯ ಅಕ್ಕಿ ವಶ

ಅಕ್ರಮವಾಗಿ ಸಾಗಿಸುತಿದ್ದ ಅನ್ನಭಾಗ್ಯ ಅಕ್ಕಿ ವಶ

0

ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಬಳಿ ಈಚರ್ ವಾಹನದಲ್ಲಿ ಸಾಗಿಸುತಿದ್ದ ಸುಮಾರು 6250 ಕೆಜಿ ಅರು ಟನ್ ಗು ಹೆಚ್ಚಿನ ಅಕ್ಕಿ ಮೂಟೆಯನ್ನು ಈಚರ್ ನಲ್ಲಿ ಹಾಕಿಕೊಂಡು ಹಿಂದೆ ಖಾಲಿ ಟಮೋಟೋ ಟ್ರೈ ಗಳನ್ನು ಇಟ್ಟು ಯಾರಿಗೂ ಅನುಮಾನ ಬರದಂತೆ ಸಾಗಿಸುತಿದ್ದ ಇಬ್ಬರು ಆರೋಪಿಗಳನ್ನು ತೆರಕಣಾಂಬಿ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ಆಹಾರ ಇಲಾಖೆ ಮುಖ್ಯಾಧಿಕಾರಿ ಭಾರತಿ ಸೇರಿದಂತೆ  ಪೊಲೀಸರು ಹಾಗೂ ಅಹಾರ ಇಲಾಖೆಯ ಅಧಿಕಾರಿಗಳ ತಂಡ ಜಂಟಿಯಾಗಿ ದಾಳಿ ನಡೆಸಿ ಲಾರಿ ಮತ್ತು ಅಕ್ಕಿಯನ್ನು ವಶಪಡಿಸಿಕೊಂಡು ಅರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಪೈರೋಜ್ ಖಾನ್ ಬಿನ್ ರಸೆಲ್ ಖಾನ್ ಕಿರಗಾವಲು ಮಂಡ್ಯ ಹಾಗೂ ಮತ್ತೊಬ್ಬ ಆರೋಪಿ ಪ್ರೇಮ್ ಕುಮಾರ್ ಗಾಳೀಪುರ ಚಾಮರಾಜನಗರ ಜಿಲ್ಲೆ ಇವರು ಗುಂಡ್ಲುಪೇಟೆ ಮಾರ್ಗವಾಗಿ ತೆರಕಣಾಂಬಿ ಮೂಲಕ ಚಾಮರಾಜನಗರಕ್ಕೆ ಈಚರ್ ಲಾರಿ ಸಂಖ್ಯೆ ಕೆಎ 02 ಬಿ 7097 ಮೂಲಕ ಸಾಗಿಸುತ್ತಿರುವಾಗ ತೆರಕಣಾಂಬಿ ಪೊಲೀಸ್ ಠಾಣೆಯ ನಾಡ ಕಚೇರಿ ಮುಂಭಾಗ ದಾಳಿ ನಡೆಸಿ ಅರೊಪಿಗಳನ್ನು ಬಂದಿಸಿದ್ದಾರೆ.
ಬಂದಿತ ಆರೋಪಿಗಳು ಸಾಗಿಸುತಿದ್ದ ಅನ್ನಭಾಗ್ಯದ ಅಕ್ಕಿ ಗುಂಡ್ಲುಪೇಟೆ ಯಿಂದ ಸಾಗಿಸಲಾಗುತಿತ್ತೆ ಸ್ಥಳೀಯರ ಕೈವಾಡ ವಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

Advertisement
Google search engine
ಹಿಂದಿನ ಲೇಖನಸಚಿವ ಕೆ.ಸಿ.ನಾರಾಯಣಗೌಡರ ಬೇಜವಬ್ದಾರಿತನ ಖಂಡಿಸಿ ತಮಟೆ ಚಳವಳಿ
ಮುಂದಿನ ಲೇಖನಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿ ಸಫಾರಿ ಜೋನ್‌ನಲ್ಲಿ ರಾಜಹುಲಿ ದರ್ಶನ