ಮನೆ ರಾಜಕೀಯ ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಷಡ್ಯಂತ್ರ: ಸಚಿವ ಬಿ.ಸಿ.ನಾಗೇಶ್

ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳ ಷಡ್ಯಂತ್ರ: ಸಚಿವ ಬಿ.ಸಿ.ನಾಗೇಶ್

0

ಬೆಂಗಳೂರುಕಾಲೇಜು ಹೆಣ್ಣುಮಕ್ಕಳು ಖ್ಯಾತ ವಕೀಲರಿಂದ ವಾದ ಮಾಡಿಸ್ತಾರೆ ಎಂದರೆ ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಗೆ ಈವರೆಗೆ ಕರ್ನಾಟಕದವರು ಹೋಗಿಲ್ಲ. ಮುಂದಿನ ವಾರದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತವೆ. ಸೋಮವಾರ ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಸಭೆಯ ನಂತರ ಎಲ್ಲವೂ ನಿರ್ಧಾರವಾಗಲಿದೆ. ಕೇರಳದಲ್ಲಿ ಹಿಜಾಬ್ ದೊಡ್ಡಮಟ್ಟದಲ್ಲಿ ವಿವಾದವಾಗಲಿಲ್ಲ. ಇವರ ಉದ್ದೇಶ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡೋದಾಗಿದೆ ಎಂದು ಆರೋಪಿಸಿದರು.

ಹಿಜಾಬ್ ವಿಚಾರ ಕೋರ್ಟ್​ಗೆ ಬಂದಿದೆ. ಕೋರ್ಟ್ ಆರ್ಡರ್ ಬರೋಕು ಮುನ್ನ ಶಾಲೆಗಳಲ್ಲಿ ಗಲಾಟೆಯಾಗಿದೆ. ಮಕ್ಕಳು ರಾಜಕೀಯದ ಶಕ್ತಿ ಉಪಯೋಗಿಸಬಾರದು ಅಂತ ಮೂರು ದಿನ ಶಾಲೆ ಕ್ಲೋಸ್ ಮಾಡಿದ್ವಿ. ಕೋರ್ಟ್ ಶಾಲೆ ಮುಂದುವರೆಸಿ ಎಂದು ಹೇಳಿದೆ. ಸರ್ಕಾರದ ಸಮವಸ್ತ್ರ ಆದೇಶ ಶಾಲೆಗಳು ಆಗಬೇಕು. ಸಮವಸ್ತ್ರ ಧರಿಸಬೇಕು, ಧರ್ಮ ಸೂಚಿಸುವ ವಸ್ತ್ರ ಹಾಕುವಂತಿಲ್ಲ ಅಂದಿದ್ದಾರೆ. ಸೋಮವಾರ ಹೈಸ್ಕೂಲ್ ಶುರುವಾಗಲಿದೆ ಎಂದರು.

ಸುಪ್ರೀಂಕೋರ್ಟ್​ಗೆ ಹೋಗಿರುವವರ ನಿಜಬಣ್ಣ ಬಯಲಾಗಿದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಯಾವಾಗ ಮಧ್ಯಸ್ಥಿಕೆ ವಹಿಸಬೇಕೋ ಅವಾಗ ಬರುತ್ತೇವೆ ಅಂತ ಸುಪ್ರೀಂಕೋರ್ಟ್ ಹೇಳಿದೆ ಎಂದರು.

ಯಾರು ಇದರ ಹಿಂದೆ ಇದ್ದಾರೆ ಅನ್ನೋದು ಜನರಿಗೆ ಗೊತ್ತಾಗಿದೆ. ಯೂತ್​ ಕಾಂಗ್ರೆಸ್ ಅಧ್ಯಕ್ಷರು ಸುಪ್ರೀಂಗೆ ಅರ್ಜಿ ಹಾಕಿದ್ದಾರೆ. ನಾವು ಇದರ ಹಿಂದೆಯಿಲ್ಲ ಅಂದವರ ಬಣ್ಣ ಬಯಲಾಗಿದೆ. ಹಾಗಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿದ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹಿಂದಿನ ಲೇಖನ‘ಅಲ್ಲಾಹು ಅಕ್ಬರ್​’  ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌!
ಮುಂದಿನ ಲೇಖನಹುಲಿ ಉಗುರು ಮಾರಾಟ: ಅರಣ್ಯಾಧಿಕಾರಿಗಳಿಂದ ಇಬ್ಬರ ಬಂಧನ