ಮನೆ ಸ್ಥಳೀಯ ಸೈಕಲ್ ಗೆ ಟಿಪ್ಪರ್ ಡಿಕ್ಕಿ ಸವಾರ ಸಾವು

ಸೈಕಲ್ ಗೆ ಟಿಪ್ಪರ್ ಡಿಕ್ಕಿ ಸವಾರ ಸಾವು

0

ಶ್ರೀರಂಗಪಟ್ಟಣ:ಟಿಪ್ಪರ್ ಲಾರಿಯೊಂದು ಸೈಕಲ್ ಸವಾರನ ಮೇಲೆ ಹರಿದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮತಪಟ್ಟಿರುವ ಘಟನೆ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ರಂಗಸ್ವಾಮಿ (೪೫)ಸ್ಥಳದಲ್ಲೇ ಮತಪಟ್ಟಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಬಳಿ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಸೈಕಲ್ ಸವಾರನ ತಲೆಯ ಮೇಲೆ ಟಿಪ್ಪರ್ ಹರಿದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಗೆ ಕಾರಣವಾದ ಟಿಪ್ಪರ್ ಲಾರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಮೈಸೂರು ಪಶ್ಚಿಮ ಆರ್ ಟಿಓದಲ್ಲಿ ಮತ್ತೊಂದು ಹಗರಣ: ಅನಧಿಕೃತವಾಗಿ ಮಾಲೀಕತ್ವ ವರ್ಗಾವಣೆ ಹಾಗೂ ಕಂತು ಕರಾರು ರದ್ದತಿ
ಮುಂದಿನ ಲೇಖನತಹಶೀಲ್ದಾರ್ ಎಸಿ-ಡಿಸಿ ನ್ಯಾಯಾಲಯಗಳ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಗಡುವು ನೀಡಿದ ಸಚಿವ ಕೃಷ್ಣ ಬೈರೇಗೌಡ