ಮನೆ ಅಪರಾಧ ತಂಬಾಕು ಹದಗೊಳಿಸುವ ಬ್ಯಾರನ್ ಗೆ ಬೆಂಕಿ:  6 ಲಕ್ಷ ರೂ.ನಷ್ಟ

ತಂಬಾಕು ಹದಗೊಳಿಸುವ ಬ್ಯಾರನ್ ಗೆ ಬೆಂಕಿ:  6 ಲಕ್ಷ ರೂ.ನಷ್ಟ

0

ಮೈಸೂರು(Mysuru): ಹುಣಸೂರಿನ ಗಾವಟಗೆರೆ ಹೋಬಳಿಯ ಲಕ್ಕನಕೊಪ್ಪಲಿನಲ್ಲಿ ತಂಬಾಕು ಹದಗೊಳಿಸುವ ಬ್ಯಾರನ್ ಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 6 ಲಕ್ಷ ರೂ. ನಷ್ಟವಾಗಿದೆ.

ಮೊದಲು ದಟ್ಟಹೊಗೆ ಕಾಣಿಸಿಕೊಂಡಿದ್ದು, ಒಮ್ಮೆಲೆ ಮೇಲ್ಛಾವಣಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ.   ತಂಬಾಕು ಹದಗೊಳಿಸಲು ಡಬ್ಬಲ್ ಬ್ಯಾರನ್ ಗೆ ಏರಿಸಿದ್ದ ಹೊಗೆ ಸೊಪ್ಪು ಹಾಗೂ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸಿದ್ದಾರೆ.  ಅಕ್ಕಪಕ್ಕದ ಬ್ಯಾರನ್ ಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.

ಸಹೋದರರಾದ ನಾಗಣ್ಣ ಮತ್ತು ರಾಮಣ್ಣ ಎಂಬುವವರ ಎರಡು ಡಬ್ಬಲ್ ಬ್ಯಾರನ್ ಸುಟ್ಟು ಹೋಗಿದ್ದು, ಸುಮಾರು 6 ಲಕ್ಷ ನಷ್ಟ ಉಂಟಾಗಿದೆ.