ಮನೆ ರಾಜಕೀಯ ಮೈಸೂರು: ಫೆಬ್ರವರಿಯಲ್ಲಿ 4 ಸಾವಿರ ಗಡಿ ದಾಟಲಿರುವ ಕೊರೊನಾ

ಮೈಸೂರು: ಫೆಬ್ರವರಿಯಲ್ಲಿ 4 ಸಾವಿರ ಗಡಿ ದಾಟಲಿರುವ ಕೊರೊನಾ

0

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಫೆಬ್ರವರಿ ಮೊದಲ ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಲಿದ್ದು, 4 ಸಾವಿರ ಗಡಿ ದಾಟಲಿದೆ ಎಂದು ಮೈಸೂರು  ಜಿಲ್ಲಾ  ಉಸ್ತುವರಿ ಸಚಿವ ಹೆಚ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ. 

ಮೈಸೂರಿನಲ್ಲಿ ಮಾಧ್ಯಮದವರ  ಜೊತೆ ಮಾತನಾಡಿದ  ಅವರು, ಫೆಬ್ರವರಿ ತರುವಾಯ ಅಷ್ಟೆ ಪ್ರಮಾಣದಲ್ಲಿ ಕೊರೊನಾ ಕೇಸ್ ಇಳಿಕೆಯಾಗಲಿದೆ. ಈಗ ಮೈಸೂರಿನ ಪೋಲಿಸರು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದರು. 

ಕೊರೊನಾ ಸೋಂಕಿನ ಗುಣಲಕ್ಷಣ ಇದ್ದವರನ್ನು ಮಾತ್ರ ಟೆಸ್ಟ್ ಮಾಡುತ್ತಿದ್ದೇವೆ. ಹೀಗಾಗಿ ನಮ್ಮಲ್ಲಿ ಪಾಸಿಟಿವ್ ಸಂಖ್ಯೆ ಕಡಿಮೆ ಇದೆ. ಒಟ್ಟಾರೆ ಮೈಸೂರು ಜಿಲ್ಲೆಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು. 

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಸಿಎಂ ತೀರ್ಮಾನವಲ್ಲ. ತಜ್ಞರ ಶಿಪಾರಸ್ಸಿನಂತೆ ಸಚಿವ ಸಂಪುಟ ಈ ಬಗ್ಗೆ ತೀರ್ಮಾನ ಕೈಗೊಡಿಂಡಿದೆ. ಇದನ್ನು ಮುಂದುವರೆಸಬೇಕೆ ಅಥವಾ ಬೇಡವೆ ಎಂದು ನಾಳೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದರು. 

ಹಿಂದಿನ ಲೇಖನಅದ್ದೂರಿ ಮದುವೆಗಾಗಿ ಎಸ್ ಬಿಐನಲ್ಲಿ ಹಣ ದೋಚಿದ್ದ ವ್ಯಕ್ತಿಯ ಬಂಧನ
ಮುಂದಿನ ಲೇಖನರಾಜ್ಯದಲ್ಲಿನ ಟಫ್ ರೂಲ್ಸ್ ಸಿಎಂ ತೀರ್ಮಾನವಲ್ಲ: ಸಚಿವ ಎಸ್ ಟಿ ಸೋಮಶೇಖರ್