ಮನೆ ಅಪರಾಧ ಪಕ್ಕದ ಮನೆಯವನೊಂದಿಗೆ ಅಕ್ರಮ ಸಂಬಂಧ: ಪತಿಯನ್ನು ಕೊಂದ ಪತ್ನಿ ಬಂಧನ

ಪಕ್ಕದ ಮನೆಯವನೊಂದಿಗೆ ಅಕ್ರಮ ಸಂಬಂಧ: ಪತಿಯನ್ನು ಕೊಂದ ಪತ್ನಿ ಬಂಧನ

0

ಮೈಸೂರು(Mysuru): ಪಕ್ಕದ ಮನೆಯ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪತಿಯ ಕತ್ತು ಹಿಸುಕಿ ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ ಮಹಿಳೆಯನ್ನು ಬಂಧಿಸಿರುವ ಘಟನೆ ಹುಣಸೂರು ತಾಲ್ಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದೆ.
ಲೋಕಮಣಿ(೩೬) ಕೊಲೆಯಾದ ದುರ್ದೈವಿ.
೯ ವರ್ಷಗಳ ಹಿಂದೆ ಲೋಕಮಣಿ, ಹೆಚ್.ಡಿ.ಕೋಟೆ ತಾಲ್ಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾ ಎಂಬಾಕೆಯನ್ನು ವಿವಾಹವಾಗಿದ್ದನು. ಆದರೆ ಶಿಲ್ಪಾಗೆ ಪಕ್ಕದ ಮನೆಯ ಅಭಿ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಇವರಿಬ್ಬರ ಅಕ್ರಮ ಸಂಬಂಧ ತಿಳಿದ ಪತಿ ಮನೆಯಲ್ಲಿ ಜಗಳವಾಡಿದ್ದು, ಈ ಸಂದರ್ಭ ವಿಚಾರವನ್ನು ಯಾರಿಗೂ ತಿಳಿಸದಂತೆ ಅಂಗಲಾಚಿದ್ದ ಶಿಲ್ಪಾ, ಲೋಕಮಣಿ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಇದಾದ ಬಳಿಕ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಬಿಂಬಿಸಿ, ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಳು.
ಘಟನೆ ನಡೆದ ಹಲವು ದಿನಗಳ ನಂತರ ಹುಣಸೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಮಾಡಿರುವ ವಿಷಯ ಗೊತ್ತಾಗಿದ್ದು, ಶಿಲ್ಪಾಳನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಪತ್ತೆಯಾಗಿರುವ ಪಕ್ಕದ ಮನೆಯ ಅಭಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹಿಂದಿನ ಲೇಖನಹಿಂದೂ ದೇವರಲ್ಲಿ ನಂಬಿಕೆ ಇರುವ ಅನ್ಯಧರ್ಮೀಯರು ದೇಗುಲ ಪ್ರವೇಶಿಸುವುದನ್ನು ತಡೆಯುವಂತಿಲ್ಲ: ಮದ್ರಾಸ್ ಹೈಕೋರ್ಟ್
ಮುಂದಿನ ಲೇಖನಕೆಆರ್‌ಎಸ್ ಜಲಾಶಯದಿಂದ ನದಿಗೆ ೧೦ ಸಾವಿರ ಕ್ಯೂಸೆಕ್ ನೀರು ಬಿಡುಗಡೆ