ಮನೆ ಸುದ್ದಿ ಜಾಲ ಪ್ರವಾಸ ಮತ್ತು ಶಿಕ್ಷಣ ನಮ್ಮ ಬದುಕನ್ನು ಹಸನು ಮಾಡಬಲ್ಲವು: ಡಿ.ಮಾದೇಗೌಡ

ಪ್ರವಾಸ ಮತ್ತು ಶಿಕ್ಷಣ ನಮ್ಮ ಬದುಕನ್ನು ಹಸನು ಮಾಡಬಲ್ಲವು: ಡಿ.ಮಾದೇಗೌಡ

0

ಮೈಸೂರು(Mysuru): ಲೋಕ ಕಲ್ಯಾಣ ಮತ್ತು ಶಾಂತಿ ಸ್ಥಾಪನೆಯ ಉದ್ದೇಶವನ್ನು ಹೊಂದಿದ್ದ ಮಲೆ ಮಹದೇಶ್ವರರ ಚಿಂತನೆಗಳನ್ನು ಯುವಜನಾಂಗಕ್ಕೆ ತಲುಪಿಸಬೇಕು. ಪ್ರವಾಸ ಮತ್ತು ಶಿಕ್ಷಣ ನಮ್ಮ ಬದುಕನ್ನು ಹಸನು ಮಾಡಬಲ್ಲವು. ಅದಕ್ಕೆ ಆದ್ಯತೆ ಕೊಡಬೇಕು ಎಂದು ಎಂದು ಸಮಾಜ ಸೇವಕ ಡಿ.ಮಾದೇಗೌಡ ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅನೇಕ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ನಾವು ಗಮನಿಸಬಹುದು. ಅವೆಲ್ಲವೂ ಮಾನವ ನಿರ್ಮಿತ. ಆದರೆ, ಮಲೆ ಮಹದೇಶ್ವರರು ಸುತ್ತಾಡಿದ ಪುಣ್ಯಭೂಮಿಯು ಪ್ರಕೃತಿಯಿಂದ ಸಂಪದ್ಭರಿತವಾದುದು. ಆದ್ದರಿಂದ ಇದು ನಿಜಾರ್ಥದಲ್ಲಿ ಬ್ರಹ್ಮಾಂಡವಾಗಿದೆ’

ಮಲೆ ಮಹದೇಶ್ವರ ಬೆಟ್ಟದಲ್ಲಿ 77 ಬೆಟ್ಟಗಳ ಸಾಲನ್ನು ಕಾಣಬಹುದು. 800 ವರ್ಷಗಳ ಹಿಂದೆ ಮಹದೇಶ್ವರರು ಬಂದಾಗ ಇದು ಕತ್ತಲ ರಾಜ್ಯವಾಗಿತ್ತು. ಕೋಟೆಯೊಳಗಡೆ ಮೈಸೂರು ಇತ್ತು. ಐದು ದಟ್ಟಾರಣ್ಯಗಳನ್ನು ಹೊಂದಿರುವ ಮೈಸೂರು ಸೀಮೆಯು ಇಂದು ಜಗದ್ವಿಖ್ಯಾತಿಯನ್ನು ಪಡೆದಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನನ ಪ್ರಾಂಶುಪಾಲ ಪ್ರೊ.ಸೋಮಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ, ಐಕ್ಯೂಎಸಿ ಸಂಚಾಲಕ ಡಾ.ಎಸ್ ಮಂಜು ಇದ್ದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನನ ಸಹಾಯಕ ಪ್ರಾಧ್ಯಾಪಕ ಎಂ.ಮಹಾಲಿಂಗ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎಸ್ ಶಂಕರಪ್ಪ ನಿರೂಪಿಸಿದರು. ಪ್ರಾಧ್ಯಾಪಕ ಡಾ.ಕೆ.ಇ.ಗೋವಿಂದೇಗೌಡ ವಂದಿಸಿದರು.

ಹಿಂದಿನ ಲೇಖನಐಪಿಎಲ್- 2023: ಸಿಎಸ್’ಕೆ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ
ಮುಂದಿನ ಲೇಖನಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ನಿರ್ದೇಶಿಸಿದ ಬಾಂಬೆ ಹೈಕೋರ್ಟ್: ತಯಾರಿಕೆಗೆ ಸಮ್ಮತಿ, ಮಾರಾಟಕ್ಕಿಲ್ಲ ಅನುಮತಿ