ಮನೆ ಕಾನೂನು ಖಾಸಗಿ ಬಸ್‌ ಗಳ ಫುಟ್‌ ಬೋರ್ಡ್‌ ನಲ್ಲಿ ಪ್ರಯಾಣ: 123 ಕೇಸ್ ದಾಖಲಿಸಿದ ಪೊಲೀಸರು

ಖಾಸಗಿ ಬಸ್‌ ಗಳ ಫುಟ್‌ ಬೋರ್ಡ್‌ ನಲ್ಲಿ ಪ್ರಯಾಣ: 123 ಕೇಸ್ ದಾಖಲಿಸಿದ ಪೊಲೀಸರು

0

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದಲ್ಲಿ ಸಂಚರಿಸುವ ಖಾಸಗಿ ಬಸ್‌ ಗಳ ಫುಟ್‌ಬೋರ್ಡ್‌ ನಲ್ಲಿ ಪ್ರಯಾಣಿಸುತ್ತಿದ್ದ ಆರೋಪದ ಮೇರೆಗೆ ಮಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 123 ಕೇಸ್ ಗಳನ್ನು ದಾಖಲಿಸಿದ್ದಾರೆ.

ಮೊನ್ನೆ ಮಧ್ಯಾಹ್ನ ಮಂಗಳೂರು ನಗರದ ನಂತೂರು ಸರ್ಕಲ್ ಬಳಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಫುಟ್‌ ಬೋರ್ಡ್‌ ನಲ್ಲಿ ನಿಂತಿದ್ದ ಕಂಡೆಕ್ಟರ್ ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಬಸ್ ಮಾಲಕರ ಜೊತೆ ಮಾತುಕತೆ ನಡೆಸಿ ಕೆಲವೊಂದು ಸೂಚನೆಗಳನ್ನು ನೀಡಿ ಅವುಗಳ ಪಾಲನೆಗೆ ನಿರ್ದೇಶನ ನೀಡಿದ್ದರು.

ಬಸ್ ಮಾಲಕರ ಜತೆ ಎರಡನೇ ಹಂತದ ಸಭೆ ನಡೆಸಿದ ಪೊಲೀಸ್ ಕಮಿಷನರ್ ಬಸ್‌ ಗಳಿಗೆ ಬಾಗಿಲು ಅಳವಡಿಸಲು ಸೂಚಿಸಿದ್ದಾರೆ. ಇದಕ್ಕೆ ಬಸ್ ಮಾಲಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಫುಟ್‌ ಬೋರ್ಡ್‌ ನಲ್ಲಿ ಪ್ರಯಾಣಿಕರು ಅಥವಾ ಸಿಬ್ಬಂದಿ ವರ್ಗವು ನೇತಾಡದಂತೆ ಸೂಚನೆ ನೀಡಲಾಗುವುದು. ಒಂದು ವೇಳೆ ಈ ಸೂಚನೆ ಮೀರಿ ನಡೆದರೆ ಬಸ್ ಸಂಚಾರ ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಈ ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಬಸ್ ಮಾಲಕರ ಸಂಘದ ಮುಖಂಡರು ಭರವಸೆ ನೀಡಿರುವುದಾಗಿ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಫ್ಲೂ
ಮುಂದಿನ ಲೇಖನಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ