ಮನೆ ಅಪರಾಧ ಮೇಲಾಧಿಕಾರಿಯ ದರ್ಪ: ರೇಷ್ಮೆ ಇಲಾಖೆ ಡಿ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನ

ಮೇಲಾಧಿಕಾರಿಯ ದರ್ಪ: ರೇಷ್ಮೆ ಇಲಾಖೆ ಡಿ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನ

0

ಚಾಮರಾಜನಗರ(Chamarajanagar): ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರ ಹಿಂಸೆಗೆ ಬೇಸತ್ತು ಡಿ ಗ್ರೂಪ್ ನೌಕರರ ಕಛೇರಿಯಲ್ಲೇ ವಿಷ ಸೇವಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಸದ್ಯ ನೌಕರನ ಪರಿಸ್ಥಿತಿ ಗಂಭೀರವಾಗಿದ್ದು, ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ ? : ಕೊಳ್ಳೇಗಾಲ ತಾಲ್ಲೂಕಿನ ಮಲ್ಲಳ್ಳಿಮಾಳ ಗ್ರಾಮದ ಲೋಕೇಶ್ ಎಂಬುವವರು ರೇಷ್ಮೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು. ಇಬ್ಬರು ಮಕ್ಕಳನ್ನು ಚಾಮರಾಜನಗರದ ಸೆಂಟ್ ಜೋಸೆಫ್ ಶಾಲೆಗೆ ಸೇರಿಸಿ ನಗರದಲ್ಲೇ ಉಳಿದಿದ್ದಾರೆ. ಕಳೆದ ೧ ವರ್ಷದಿಂದ ವಸತಿ ಗೃಹಕ್ಕಾಗಿ ಅರ್ಜಿ ಸಲ್ಲಿಸಿ ಅಲೆದು ಸಾಕಾಗಿದ್ದರು. ಬುಧವಾರ ರೇಷ್ಮೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಶ್ವೇತಾ ಅವರಿಗೆ ಮನವಿ ಸಲ್ಲಿಸಿ ಮತ್ತೊಮ್ಮೆ ವಸತಿ ಗೃಹ ಕಲ್ಪಿಸುವಂತೆ ಕೇಳಿಕೊಂಡಿದ್ದರು.

ಲೋಕೇಶ್ ಅವರಿಗೆ ಒಂದು ವರ್ಷಗಳಿಂದಲೂ ಮಾನಸಿಕ ಹಿಂಸೆ ನೀಡಿ, ಜಾತಿ ದೌರ್ಜನ್ಯ ಮಾಡುತ್ತಿದ್ದ ಅಧಿಕಾರಿ ಶ್ವೇತಾ ಅವರು ನಾನು ಇರುವವರೆಗೂ ನೀನು ವಸತಿ ಗೃಹ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ದರ್ಪದ ಮಾತುಗಳನ್ನು ಆಡಿದ್ದು, ಮನನೊಂದ ನೌಕರ ಕಛೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಎಂದು ಲೋಕೇಶ್ ಅವರ ಪತ್ನಿ ಸುಧಾಮಣಿ ಮಾಹಿತಿ ನೀಡಿದರು.

ಹಿಂದಿನ ಲೇಖನಬೆಳಗ್ಗೆ ಬರೀ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರ ಲಾಭ ಏನು ಗೊತ್ತಾ ?
ಮುಂದಿನ ಲೇಖನಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ: ಬಿ.ಎಸ್.ಯಡಿಯೂರಪ್ಪ