ಮನೆ ಆರೋಗ್ಯ ಹೃದಯ ರೋಗಿಗಳಿಗೆ ಚಿಕಿತ್ಸೆ: ಭಾಗ ಎರಡು

ಹೃದಯ ರೋಗಿಗಳಿಗೆ ಚಿಕಿತ್ಸೆ: ಭಾಗ ಎರಡು

0

 ಎಂಜಿಯೋ ಪ್ಲಾಸ್ಟಿ

ಎಂಜಿಯೋ ಪ್ಲಾಸ್ಟಿ ಎನ್ನುವುದು ಆಪರೇಷನ್ ಅಲ್ಲ.

Join Our Whatsapp Group

★ಈ ಪದತಿಯಲ್ಲಿ Catheter ಎಂದು ಕರೆಯಲ್ಪಡುವ ಒಂದು ಉದ್ದನೆಯ ತೆಳುವಾದ ಟ್ಯೂಬನ್ನು ರೋಗಿಯ ತೊಡೆಯ ಮೇಲ್ಭಾಗದಲ್ಲಿರುವ ಧಮನಿಯ ಮೂಲಕ ಹೃದಯದ ವರೆಗೂ ಸೇರಿಸುತ್ತಾರೆ.

★ ಈ ಟ್ಯೂಬಿನ ಮೂಲಕ ಪ್ರತ್ಯೇಕ  (Contrast)ದ್ರವವನ್ನು ಇಂಜೆಕ್ಟ್ ಮಾಡಿ, ಅದು ಹೃದಯದ ಕವಾಟಗಳು, ಕರೋನರಿ ಧಮನಿಗಳ  ಮೂಲಕ ಹರಿಯುತ್ತಿರುವಾಗ,ಅವುಗಳ ಫೋಟೋ (Line Film)ತೆಗೆಯುತ್ತಾರೆ. ಫೋಟೋಗಳ ಮೂಲಕ ಕಾರ್ಡಿಯಾಲಜಿಸ್ಟ್ ಗೆ  ಕಿರೀಟ (ಕರೋನರಿ) ಧಮನಿಯ  ಯಾವ ಭಾಗ ಮುಚ್ಚಿಹೋಗಿದೆ. ಯಾವ ಭಾಗ ಇಕ್ಕಟ್ಟಾಗಿದೆ. ಎಂದು ತಿಳಿದು ಬರುತ್ತದೆ.

★ಆಗ ಧಮನಿಯನ್ನು ತೆರೆಯಲು ಅಥವಾ ಅದರ ಮಾರ್ಗವನ್ನು ವಿಶಾಲಗೊಳಿಸಲು.ಈ ಕೆಳಗಿನ ನಾಲ್ಕು ಪದತಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಬಲೂನ್ ಎಂಜಿಯೋ ಪ್ಲಾಸ್ಟಿ    

ಎಂಬ ಟ್ಯೂಬಿನ ಮೂಲಕ ಒಂದು ಚಿಕ್ಕ ಬಲೂನನ್ನು ಇಕಟ್ಟಾಗಿರುವ ಧಮನಿಯ ಜಾಗಕ್ಕೆ ತೆಗೆದುಕೊಂಡು ಹೋಗಿ. ಅಲ್ಲಿ ಬಲೂನನ್ನು ಹಿಗ್ಗಿಸುವುದರ ಮೂಲಕ ರಥನಾಳವನ್ನು ವಿಶಾಲಗೊಳಿಸಿ, ಹೃದಯಕ್ಕೆ ರಕ್ತ ಪೂರೈಕೆ ಸುಗಮವಾಗುವಂತೆ ಮಾಡುತ್ತಾರೆ.

ಸ್ವೆಂಟನ್ನು ಪ್ರವೇಶ ಗೊಳಿಸುವುದು.

 ಕರೋನರಿ ನಾಳವನ್ನು ಸರಿಪಡಿಸಿದರೂ ಸಹ,ಕೆಲವು ಸಂದರ್ಭಗಳಲ್ಲಿ ಅವು ಪದೇ ಪದೇ ಮುಚ್ಚಿಕೊಳ್ಳುತ್ತಿರುತ್ತವೆ. ಹಾಗೆ ಆಗದಿರಲು ಸ್ಟೆಂಟ್ ಗಳನ್ನು ಅಳವಡಿಸುತ್ತಾರೆ .

ಸ್ಟೆಂಟ್ ಅನ್ನುವುದು ಒಂದೂವರೆ ಸೆಂಟಿಮೀಟರ್ ಉದ್ದವಿದ್ದು, ಗುಂಡು ಸೂಜಿಯಗೆ ಮೀರಿದ ತೂಕದ ಮಿಷ ತರಹದ ಸೈಯನ್ ಟ್ಯೂಬ್

ಇಕ್ಕಟ್ಟಾಗ ಧಮನಿಯ ಭಾಗಕ್ಕೆ ಸ್ಟೆಂಟ್ ಕಳಿಸಲು ಬಲೂನ್ ನೊಡನೆ ಕೂಡಿರುವಟ್ಯೂ ಬನ್ನು ಉಪಯೋಗಿಸುತ್ತಾರೆ. ಕಿರಿದಾದ ಧಮನಿಯ ಜಾಗಕ್ಕೆ ಸ್ಟೆಂಟನ್ನು ಸೇರಿಸಿದ ನಂತರ, ವಿಶಾಲವಾಗಿ  ತೆರೆದು ಧಮನಿಯ ಒಳಗೆ ಜೋಡಿಸುತ್ತಾರೆ.

ಆದ್ದರಿಂದ ಮುಚ್ಚಿಕೊಂಡಿರುವ ರಕ್ತನಾಳ ವಿಸ್ತಾರಗೊಂಡು ರಕ್ತದ ಪೂರೈಕೆ ನಿರಂತರವಾಗಿ, ನಿರಂತರವಾಗಿ ನಡೆಯುತ್ತದೆ.

ಹಿಂದಿನ ಲೇಖನಚಿನ್ನದ ಗಟ್ಟಿಯ ಆಮಿಷ: 12.24 ಲಕ್ಷ ವಂಚನೆ
ಮುಂದಿನ ಲೇಖನಆಡಿಯೋ, ವಿಡಿಯೋ ದಾಖಲೆಯೂ ಇನ್ನು ಸಾಕ್ಷಿ: ಕರ್ನಾಟಕದ ತಿದ್ದುಪಡಿಗೆ ರಾಷ್ಟ್ರಪತಿ ಅಂಕಿತ