ಮನೆ ರಾಜ್ಯ ಭಾರತ-ಪಾಕ್‌ ಯುದ್ಧ ನಿಲ್ಲಿಸದಿದ್ರೆ ಸುಂಕ ಹಾಕ್ತೀನಿ ಅಂತ ಎಚ್ಚರಿಸಿದ್ದೆ – ಟ್ರಂಪ್‌ ಪುನರುಚ್ಚಾರ

ಭಾರತ-ಪಾಕ್‌ ಯುದ್ಧ ನಿಲ್ಲಿಸದಿದ್ರೆ ಸುಂಕ ಹಾಕ್ತೀನಿ ಅಂತ ಎಚ್ಚರಿಸಿದ್ದೆ – ಟ್ರಂಪ್‌ ಪುನರುಚ್ಚಾರ

0

ವಾಷಿಂಗ್ಟನ್‌ : 2025 ರ ಮಿಲಿಟರಿ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರು ಯುದ್ಧವನ್ನು ನಿಲ್ಲಿಸದಿದ್ದರೆ, ಅವರ ಮೇಲೆ 200% ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

ತಮ್ಮ ಶಾಂತಿ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ, ಯುದ್ಧದ ಸಮಯದಲ್ಲಿ 11 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಮಾತನಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಮಿಲಿಟರಿ ಮುಖಾಮುಖಿಯ ಸಂದರ್ಭದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಮತ್ತು ತನ್ನ ಯುದ್ಧ ವಿಮಾನಗಳಿಗೆ ಹಾನಿ ಹೇಳಿಕೆಗಳನ್ನು ಭಾರತ ನಿರಂತರವಾಗಿ ನಿರಾಕರಿಸುತ್ತ ಬಂದಿದೆ.

ಪಾಕಿಸ್ತಾನ ಮತ್ತು ಭಾರತ. ಅದು ದೊಡ್ಡ ವಿಷಯವಾಗಿತ್ತು. ನೀವು (ಶೆಹಬಾಜ್‌ ಷರೀಫ್) ನಿಜವಾಗಿಯೂ ನಿಲ್ಲಬೇಕು ಎಂದು ನಾನು ಭಾವಿಸುತ್ತೇನೆ. ಬನ್ನಿ, ದಯವಿಟ್ಟು, ಒಂದು ಕ್ಷಣ ನಿಂತುಕೊಳ್ಳಿ. ಪಾಕಿಸ್ತಾನ ಮತ್ತು ಭಾರತ. ತುಂಬಾ ಧನ್ಯವಾದಗಳು ಎಂದು ಕಾರ್ಯಕ್ರಮದಲ್ಲಿ ಪಾಕ್‌ ಪ್ರಧಾನಿ ಕರೆದು ನಿಲ್ಲಿಸಿಕೊಂಡು ಟ್ರಂಪ್‌ ಮಾತನಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸುವ ಮೂಲಕ ಟ್ರಂಪ್ ಅವರು, 2.5 ಕೋಟಿ ಜನರ ಜೀವ ಉಳಿಸಿದ್ದಾರೆ ಎಂದು ಷರೀಫ್ ಹೇಳಿಕೊಂಡಿದ್ದಾರೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ನೀವು ಆ ಹೇಳಿಕೆ ನೀಡಿದ್ದೀರಿ. ಪ್ರಾಣಹಾನಿ ಜೊತೆಗೆ ಇನ್ನೂ ಹೆಚ್ಚಿನ ತೊಂದರೆಗಳಾಗಬಹುದಿತ್ತು. ಆ ಯುದ್ಧ ಭರದಿಂದ ಸಾಗುತ್ತಿತ್ತು. ಪಾಕಿಸ್ತಾನ ಮತ್ತು ಭಾರತದ ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ಸಂಘರ್ಷವನ್ನು ಕೊನೆಗೊಳಿಸುವ ಮೂಲಕ ಕೋಟಿ ಜೀವಗಳನ್ನು ಉಳಿಸಲಾಯಿತು ಎಂದು ಪಾಕ್‌ ಪ್ರಧಾನಿ ಬಳಿ ಟ್ರಂಪ್‌ ಹೇಳಿದ್ದಾರೆ.