ತುಮಕೂರು(Tumkur): ತಾಯಿ ಮತ್ತು ಮೂರು ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾವ್ಯ ಹಾಗೂ ಜೀವನ್ ಕೊಲೆಯಾದವರು. ಮನೆಯಲ್ಲೇ ಇಬ್ಬರ ಶವ ಪತ್ತೆಯಾಗಿವೆ. ಕೊಲೆ ಬಳಿಕ ಆಕೆಯ ಗಂಡ ನಾಪತ್ತೆಯಾಗಿದ್ದು, ಕಾವ್ಯರನ್ನು ಗಂಡನೇ ಕೊಲೆ ಮಾಡಿದ್ದಾನೆ ಎಂಬ ಸಂಶಯ ವ್ಯಕ್ತವಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ಕೊಲೆ ನಡೆದಿರಬಹುದು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಸ್ಥಳಕ್ಕೆ ಸಿಪಿಐ ನದಾಫ್ ಹಾಗೂ ಚೇಳೂರು ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.