ಮನೆ ರಾಜಕೀಯ ತುಮಕೂರು ಮಹಾನಗರ ಪಾಲಿಕೆ: ಮೇಯರ್ ಆಗಿ ಕಾಂಗ್ರೆಸ್’ನ ಎಂ ಪ್ರಭಾವತಿ ಆಯ್ಕೆ

ತುಮಕೂರು ಮಹಾನಗರ ಪಾಲಿಕೆ: ಮೇಯರ್ ಆಗಿ ಕಾಂಗ್ರೆಸ್’ನ ಎಂ ಪ್ರಭಾವತಿ ಆಯ್ಕೆ

0

ತುಮಕೂರು(Tumkur): ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಕಾಂಗ್ರೆಸ್‌’ನ  ಎಂ.ಪ್ರಭಾವತಿ ಸುಧೀಶ್ವರ್ ಹಾಗೂ ಉಪಮೇಯರಾಗಿ ಜೆಡಿಎಸ್‌ನ ಟಿ.ಕೆ.ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ–ಎ ಗೆ ಮೀಸಲಾಗಿತ್ತು.ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲವಾಗಿದ್ದು, ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿವೆ.

ಪ್ರಸಕ್ತ ಅವಧಿಯಲ್ಲಿ ಪಾಲಿಕೆ ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿಕೊಂಡು ಬಂದಿವೆ. ಆದರೆ, ಕಳೆದ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.

ಕಾಂಗ್ರೆಸ್– ಜೆಡಿಎಸ್‌ನಲ್ಲಿ ಈ ಸಮುದಾಯದಿಂದ ಯಾರೊಬ್ಬರೂ ಆಯ್ಕೆ ಆಗಿರಲಿಲ್ಲ. ಹಾಗಾಗಿ ಹಿಂದಿನ ಬಾರಿ ಬಿಜೆಪಿ ಅಧಿಕಾರ ಅನುಭವಿಸಿತ್ತು. ಈ ಮತ್ತೆ ಈ ಎರಡೂ ಪಕ್ಷಗಳ ಮೈತ್ರಿ ಮುಂದುವರಿದಿದೆ.

ಹಿಂದಿನ ಲೇಖನಕನಿಷ್ಠ ವೇತನ ನಿಯಮ ಪಾಲಿಸಿ: ಕಾರ್ಮಿಕ ಇಲಾಖೆ ಸುತ್ತೋಲೆ
ಮುಂದಿನ ಲೇಖನಹಾಲಿಗೆ ತುಪ್ಪ ಸೇರಿಸಿ ಕುಡಿಯೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ