ತುಮಕೂರು: ಕೆರೆಗೆ ಹಾರಿ ತಾಯಿ-ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಕೆರೆಯಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ವಿಜಯಲಕ್ಷ್ಮಿ, ಯದುನಾಯಕ್, 4 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ದುರ್ದೈವಿಗಳು.
ಡೆತ್ ನೋಟ್ ಬರೆದಿಟ್ಟು ವಿಜಯಲಕ್ಷ್ಮಿ ಮಕ್ಕಳೊಂದಿಗೆ ಕೆರೆ ಹಾರಿದ್ದಾರೆ. ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆಗೆ ಶರಣಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ಪತಿ ನವೀನ್ ಅನಾರೋಗ್ಯದಿಂದ ಸಾವನಪ್ಪಿದ್ದ. ಈಗ 11 ತಿಂಗಳ ಮಗುಗೆ ಶ್ವಾಸಕೋಶ ಸಂಬಂಧಿ ಕಾಯಿಲೆ ಇತ್ತು. ಲಕ್ಷಾಂತರ ರೂ ಖರ್ಚು ಮಾಡಿದರೂ ವಾಸಿಯಾಗಿರಲಿಲ್ಲ. ಇದರಿಂದ ಮನನೊಂದು ವಿಜಯಲಕ್ಷ್ಮಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube