ಮನೆ ರಾಷ್ಟ್ರೀಯ ಕೇರಳ: ಕಂದಕಕ್ಕೆ ಉರುಳಿದ ಜೀಪ್- 9 ಮಂದಿ ಸಾವು

ಕೇರಳ: ಕಂದಕಕ್ಕೆ ಉರುಳಿದ ಜೀಪ್- 9 ಮಂದಿ ಸಾವು

0

ಮಾನಂತವಾಡಿ (ವಯನಾಡ್): ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಜೀಪ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಲ್ಲಿ ನಡೆದಿದೆ.

ಜೀಪಿನಲ್ಲಿ 12 ಮಂದಿ ಇದ್ದರು. ಗಾಯಗೊಂಡ ಮೂವರನ್ನು ವಯನಾಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ವಯನಾಡ್ ಕಲೆಕ್ಟರ್ ರೇಣು ರಾಜ್ ಖಚಿತಪಡಿಸಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ತಲಪ್ಪುಳ ಕನ್ನೋತ್ ಬೆಟ್ಟದ ಬಳಿ ಅಪಘಾತ ಸಂಭವಿಸಿದೆ. ಜೀಪಿನಲ್ಲಿ ತೋಟದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಮೃತರನ್ನುರಾಣಿ, ಶಾಂತಾ, ಚಿನ್ನಮ್ಮ, ಲೀಲಾ, ಶಾಜಬಾಬು, ರಬಿಯಾ, ಮೇರಿ ಮತ್ತು ವಸಂತ ಎಂದು ಗುರುತಿಸಲಾಗಿದೆ.

ಮೃತರಲ್ಲಿ ಒಬ್ಬರ ಗುರುತು ಪತ್ತೆಯಾಗಿಲ್ಲ. ಲತಾ, ಉಮಾದೇವಿ ಹಾಗೂ ಚಾಲಕ ಮಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಬಮಾಳ ಎಸ್ಟೇಟ್ ಕಾರ್ಮಿಕರಾಗಿದ್ದಾರೆ ಇವರು. ಜೀಪ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ಮೇರೆಗೆ ಕೋಯಿಕ್ಕೋಡ್‌ನಲ್ಲಿರುವ ಅರಣ್ಯ ಸಚಿವ ಎಕೆ ಶಶೀಂದ್ರನ್ ಅವರು ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲು ವಯನಾಡ್‌ ಗೆ ತೆರಳಿದ್ದಾರೆ. ಅಪಘಾತದ ವರದಿ ತೀವ್ರ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಮನ್‌ಮುಲ್ ನಿಂದ ಮತ್ತೆರಡು ಹೊಸ ಉತ್ಪನ್ನ ಬಿಡುಗಡೆ: “ಪನ್ನೀರ್ ನಿಪ್ಪಟ್ಟು- ನಂದಿನಿ ಸ್ಪೆಷಲ್ ಬರ್ಫಿ”
ಮುಂದಿನ ಲೇಖನನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: 10 ದಿನಗಳಾದರೂ ಪತ್ತೆಯಾಗದ ಶವ