ಮನೆ ರಾಜಕೀಯ ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ

ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ

0

ಅಗರ್ತಲಾ: ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹಾ ಅವರು ಸೋಮವಾರ ತ್ರಿಪುರಾ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.

ರಾಯ್ ಬರ್ಮನ್ ಮತ್ತು ಸಹಾ ಅವರು ಸ್ಪೀಕರ್ ರತನ್ ಚಕ್ರವರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅವರು ಮಂಗಳವಾರ ಕಾಂಗ್ರೆಸ್‌ಗೆ ಸೇರಬಹುದು ಎಂಬ ಊಹಾಪೋಹಗಳ ಎದ್ದಿದೆ. ಈ ಮಧ್ಯೆ ಅವರು ಸಂಜೆ ನವದೆಹಲಿಗೆ ಪ್ರಯಾಣಿಸಲಿದ್ದು, ದೆಹಲಿಯಲ್ಲಿ ಮುಂದಿನ ನಡೆ ಅಂತಿಮಗೊಳಿಸುತ್ತೇವೆ ಎಂದು ರಾಯ್ ಬರ್ಮನ್ ಸುದ್ದಿಗಾರರಿಗೆ ತಿಳಿಸಿದರು.‘

ನಾವು ಫೆಬ್ರವರಿ 12ರಂದು ತ್ರಿಪುರಾಕ್ಕೆ ಹಿಂದಿರುಗುತ್ತೇವೆ. ನಾವು ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದೇವೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ’ ಎಂದು ಸಹಾ ಹೇಳಿದರು.

ಹಿಂದಿನ ಲೇಖನ100 ವಿಕೆಟ್ ಗಳ ಮೈಲಿಗಲ್ಲು ದಾಟಿದ ಯಜುವೇಂದ್ರ ಚಹಲ್
ಮುಂದಿನ ಲೇಖನಕಾನೂನು ವಿದ್ಯಾರ್ಥಿ ಹೃದಯಾಘಾತದಿಂದ ಸಾವು