ಮನೆ ಕ್ರೀಡೆ 100 ವಿಕೆಟ್ ಗಳ ಮೈಲಿಗಲ್ಲು ದಾಟಿದ ಯಜುವೇಂದ್ರ ಚಹಲ್

100 ವಿಕೆಟ್ ಗಳ ಮೈಲಿಗಲ್ಲು ದಾಟಿದ ಯಜುವೇಂದ್ರ ಚಹಲ್

0

ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯಜ್ವೇಂದ್ರ ಚಹಾಲ್ 100 ವಿಕೆಟ್ ಗಳ ಮೈಲುಗಲ್ಲು ದಾಟಿದ್ದು, ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 

ವಿಂಡೀಸ್ ವಿರುದ್ಧದ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಕೋಲಸ್ ಪೂರನ್ ಅವರನ್ನು ಔಟ್ ಮಾಡುವ ಮೂಲಕ ಚಹಾಲ್ ಈ ಸಾಧನೆ ಮಾಡಿದರು. ಮತ್ತೊಂದೆಡೆ, ಚಹಾಲ್ ಕೇವಲ 60 ಏಕದಿನ ಪಂದ್ಯಗಳಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಪರ ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಚಹಾಲ್ ಪಾತ್ರರಾದರು.

ಚಾಹಲ್‌ಗಿಂತ ಮೊದಲು ಮೊಹಮ್ಮದ್ ಶಮಿ (57 ಏಕದಿನ ಪಂದ್ಯ), ಜಸ್‌ಪ್ರೀತ್ ಬುಮ್ರಾ (57 ಏಕದಿನ ಪಂದ್ಯ), ಕುಲದೀಪ್ ಯಾದವ್ (58 ಏಕದಿನ ಪಂದ್ಯ) ಮತ್ತು ಇರ್ಫಾನ್ ಪಠಾಣ್ (59 ಏಕದಿನ ಪಂದ್ಯ) ಕ್ರಮವಾಗಿ ಅಗ್ರ ನಾಲ್ಕು ಸ್ಥಾನಗಳಲ್ಲಿದ್ದಾರೆ. ಈ ಪಂದ್ಯದ ಮೂಲಕ ಚಹಾಲ್ ಉತ್ತಮ ಕಮ್ ಬ್ಯಾಕ್ ಮಾಡಿದ್ದಾರೆ. ಪೊರನ್ ಔಟಾದ ನಂತರ ಮುಂದಿನ ಎಸೆತದಲ್ಲಿ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ರನ್ನ ಗೋಲ್ಡನ್ ಡಕ್ ಪೆವಿಲಿಯನ್ ಸೇರಿಸಿದರು. ಮುಂದಿನ ಓವರ್ ನಲ್ಲಿ 12 ರನ್ ಗಳಿಸಿದ್ದ ಬ್ರೂಕ್ಸ್ ರನ್ನು ಚಾಹಲ್ ತಮ್ಮ ಉತ್ತಮ ಬೌಲಿಂಗ್ ನಿಂದಾಗಿ ಔಟ್ ಮಾಡಿ ಒಟ್ಟು ಮೂರು ವಿಕೆಟ್ ಪಡೆದರು. 

ಹಿಂದಿನ ಲೇಖನಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್
ಮುಂದಿನ ಲೇಖನಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ