ಮನೆ ರಾಜ್ಯ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು, 14 ಮಂದಿಗೆ ಗಾಯ

ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು, 14 ಮಂದಿಗೆ ಗಾಯ

0

ಲಕ್ನೋ: ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿರುವ ಘಟನೆ ಗುರುವಾರ ಮಧ್ಯರಾತ್ರಿ ಲಕ್ನೋ ಕಾಳಿಂದಿ ಪಾರ್ಕ್ ಬಳಿ ನಡೆದಿದೆ.

Join Our Whatsapp Group

ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಯ ಮಹಡಿ ಕುಸಿದು 14 ಕಾರ್ಮಿಕರು ಗಾಯಗೊಂಡಿದ್ದು, ಎರಡು ತಿಂಗಳ ಹೆಣ್ಣು ಮಗು ಮತ್ತು ಒಬ್ಬ ಪುರುಷ ನಿದ್ರೆಯಲ್ಲಿದ್ದಾಗ ಸಾವನ್ನಪ್ಪಿದ್ದಾರೆ.

ಆ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಅಲ್ಲೇ ನೆಲಪಾಳಿಗೆಯಲ್ಲಿ ವಾಸಿಸುತ್ತಿದ್ದರು, ಮಹಡಿ ಕುಸಿದಿದ್ದರಿಂದ ಕಾರ್ಮಿಕರು ನಿದ್ರೆಯಲ್ಲಿ ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ ಹೆಚ್ಚುವರಿ ಪೊಲೀಸ್ ಉಪ ಕಮಿಷನರ್ ಸೈಯದ್ ಅಲಿ ಅಬ್ಬಾಸ್ ಹೇಳಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಬದುಕುಳಿದವರಿಗಾಗಿ ಹುಡುಕಾಟ ಆರಂಭಿಸಿದೆ.

ಘಟನೆಯಲ್ಲಿ ಕಾರ್ಮಿಕ ಮುಕದಮ್ (30) ಮತ್ತು ಎರಡು ತಿಂಗಳ ಹೆಣ್ಣು ಮಗು ಐಶ್ಯಾ ಸಾವನ್ನಪ್ಪಿದ್ದು, ಗಾಯಗೊಂಡ ಇತರ 14 ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಎನ್‌ ಡಿಆರ್‌ ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಹಿಂದಿನ ಲೇಖನಹೃದಯವನ್ನು ಆರೋಗ್ಯಕರವಾಗಿಡಲು ಪ್ರತಿನಿತ್ಯ ಈ ಅಭ್ಯಾಸ ರೂಢಿಸಿಕೊಳ್ಳಿ
ಮುಂದಿನ ಲೇಖನ“ತೋತಾಪುರಿ-2′ ಚಿತ್ರ ವಿಮರ್ಶೆ