ಮನೆ ಸುದ್ದಿ ಜಾಲ ದ್ವಿಚಕ್ರವಾಹನ – ಕಾರ್ ನಡುವೆ ಅಪಘಾತ : ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ ಎಂ ಕೆ ಸೋಮಶೇಖರ್

ದ್ವಿಚಕ್ರವಾಹನ – ಕಾರ್ ನಡುವೆ ಅಪಘಾತ : ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ ಎಂ ಕೆ ಸೋಮಶೇಖರ್

0

ಮೈಸೂರು: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದ್ದು,  ತೀವ್ರ ತೆರನಾದ ಗಾಯಗೊಂಡಿದ್ದ ಗಾಯಾಳುವನ್ನು  ಮಾಜಿ ಶಾಶಕ ಎಂ.ಕೆ.ಸೋಮಶೇಖರ್ ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಕುವೆಂಪುನಗರದ ನಿಮಿಷಾಂಭ ಬಡಾವಣೆಯ ವಿವೇಕಾನಂದ ವೃತ್ತಕ್ಕೆ ಸೇರುವ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರವಾಹನ ಹಾಗೂ ಕಾರ್ ನಡುವೆ ಅಪಘಾತವಾಗಿದ್ದು, ದ್ವಿಚಕ್ರ ವಾಹನದ ಚಾಲಕ ತೀವ್ರತೆರನಾದ ಗಾಯವಾಗಿ ನರಳಾಡುತ್ತಿದ್ದ ಬಿದ್ದಿದ್ದನು. ಕುವೆಂಪುನಗರದ ಮೆಗಾ ಮೆಡಿಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ ಮುಗಿಸಿ ಅದೇ ರಸ್ತೆಯಲ್ಲಿ ವಾಪಾಸ್ಸಾಗುತ್ತಿದ್ದಾಗ ಅಪಘಾತವನ್ನು ಗಮನಿಸಿ ಕೂಡಲೇ ಧಾವಿಸಿದ ಎಂಕೆ ಸೋಮಶೇಖರ್ ರವರು ಗಾಯಾಳುವನ್ನು ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು.

ಇನ್ನಾದರೂ ಪಾಲಿಕೆ ಜಿಲ್ಲಾಡಳಿತ ಕೂಡಲೇ ಗುಂಡಿಗಳನ್ನು ಮುಚ್ಚಿ ನಾಗರೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿದರು.

ಕ್ಷೇತ್ರದ ಶಾಸಕರು ಕೆಆರ್ ಕ್ಷೇತ್ರ ಮಾದರಿ ಕ್ಷೇತ್ರ,ಸುರಕ್ಷತೆಯ ರಸ್ತೆಯುಳ್ಳ ಕ್ಷೇತ್ರ ಎಂದು ಬರೀ ಹೇಳಿಕೆ ಪ್ರಚಾರಕಷ್ಟೆ ಸೀಮಿತಗೊಳಿಸಿದ್ದಾರೆ. ದಯವಿಟ್ಟು ಕೂಡಲೇ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸರಿಪಡಿಸಿ ಅನಾಹುತಗಳು ಸಂಭವಿಸದಂತೆ  ಕಾರ್ಯೋನ್ಮುಖರಾಗಿ ಕೆಲಸ ಮಾಡಲಿ ಹೇಳಿಕೆಗಳಿಗೆ ಅಭಿವೃದ್ಧಿ ಸೀಮಿತವಾಗದಿರಲಿ ಎಂದು ಕಿಡಿಕಾರಿದರು.

ಹಿಂದಿನ ಲೇಖನಸಿಸಿಟಿವಿಗಳು ಉದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸದಂತೆ ಇರಿಸಲಾಗಿದೆ: ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಮುಂದಿನ ಲೇಖನಸಶಕ್ತ ಕರ್ನಾಟಕ ನಿರ್ಮಾಣಕ್ಕೆ ‘ಟೀಂ ಕರ್ನಾಟಕ’ ಕೆಲಸ: ಸಿಎಂ ಬೊಮ್ಮಾಯಿ