ಮನೆ ಸುದ್ದಿ ಜಾಲ ಟ್ಯಾಂಕರ್‌ ಗೆ ಕಾರು ಡಿಕ್ಕಿ: ಇಬ್ಬರು ಯುವತಿಯರ ಸಾವು

ಟ್ಯಾಂಕರ್‌ ಗೆ ಕಾರು ಡಿಕ್ಕಿ: ಇಬ್ಬರು ಯುವತಿಯರ ಸಾವು

0

ಮೈಸೂರು (Mysuru): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗೇಟ್ ಬಳಿ ನಡೆದಿದೆ.

ಮೈಸೂರು ಹೊರವಲಯದ ಆಲನಹಳ್ಳಿಯ ಸಾಫ್ಟ್ ವೇರ್ ಎಂಜಿನಿಯರ್ ಜೀವಿತಾ (24) ಹಾಗೂ ಆಕೆಯ ಗೆಳತಿ ಪ್ರತೀಕ್ಷಾ (24) ಮೃತಪಟ್ಟವರು.

ಟೈರ್ ಪಂಚರ್ ಆಗಿ ನಿಯಂತ್ರಣ ತಪ್ಪಿದ ಕಾರು, ಟ್ಯಾಂಕರ್ ಗೆ ಡಿಕ್ಕಿಯಾಗಿ ಇಬ್ಬರು ಯುವತಿಯರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೃತರು ಮೈಸೂರು ಕಡೆಯಿಂದ ಹುಣಸೂರಿನತ್ತ ತೆರಳುತ್ತಿದ್ದಾಗ ಅಪಘಾತವಾಗಿದೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಮೈಸೂರಿಗೆ ಪ್ರಧಾನಿ ಮೋದಿ ಭೇಟಿ: ಸಿದ್ಧತೆ ಪರಿಶೀಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ