ಉಡ್ಡಿಯಾನ ಅಥವಾ ಉಡ್ಡಯನ ಎಂದರೆ ಮೇಲಕ್ಕೆ ಹಾರುವುದು. ಇದರಿಂದ ಹೊಟ್ಟೆ ಕೆಳಭಾಗದಿಂದ ಮೇಲ್ಭಾಗಕ್ಕೆ ತಲೆಗೆ ಪ್ರಾಣಶಕ್ತಿ ಹರಿಯುತ್ತದೆ. ವಫೆಯ ಮೇಲಕ್ಕೆ ಎತ್ತಲ್ಪಟ್ಟು ಹೊಟ್ಟೆಯ ಅಂಗಗಳು ಹಿಂದಕ್ಕೆ ಮತ್ತು ಮೇಲ್ಭಾಗಕ್ಕೆ ಬೆನ್ನುಹುರಿಯ ಕಡೆಗೆ ಎತ್ತಲ್ಪಡುತ್ತದೆ. ಮೊದಲು ನಿಂತ ಸ್ಥಿತಿಯಲ್ಲಿ ಬಂಧವನ್ನು ಅಭ್ಯಾಸ ನಂತರ ಕುಳಿತ ಸ್ಥಿತಿಯಲ್ಲಿ ಅಳವಡಿಸಿಕೊಳ್ಳಿ, ಆದರೆ ಉಡ್ಡಯನ ಬಂದವು ಕೈಗೂಡುವವರೆಗೆ ಪ್ರಾಣಾಯಾಮದಲ್ಲಾಗಲಿ, ಅಂತರ ಕುಂಭಕದ ಸಮಯದಲ್ಲಾಗಲಿ ಅದನ್ನು ಅಳವಡಿಸಿಕೊಳ್ಳುವಂತಿಲ್ಲ, ಆದ್ದರಿಂದ ಹೃದಯಕ್ಕೆ ಘಾಸಿಯಾಗುತ್ತದೆ.
ಅಭ್ಯಾಸ ಕ್ರಮ :
ಕಾಲುಗಳ ನಡುವೆ ಒಂದು ಅಡಿ ಅಂತರವಿಟ್ಟು ತಾಳಸನದಲ್ಲಿ ನಿಲ್ಲಿ. ಮಂಡಿಗಳನ್ನು ಬಗ್ಗಿಸಿ ಮುಂದೆಬಾಗಿ ಬೆರಳುಗಳನ್ನು ಬಿಡಿಸಿ ಎರಡು ಕೈಗಳಿಂದ ಮಂಡೆಯ ಮೇಲ್ಭಾಗವನ್ನು ಹಿಡಿದುಕೊಂಡು ಮೊಣಕೈಗಳನ್ನು ಸ್ವಲ್ಪ ಮಾಡಿಸಿಕೊಂಡು ಗದ್ದವನ್ನು ಆದಷ್ಟು ಒಳಗೆಮಾಡಿ ಜಲಂದರ ಬಂದ ಹಾಕಬೇಕು. ದೀರ್ಘ ಶಾಸನ ಮಾಡಿ ಒಮ್ಮೆಲೆ ಜೋರಾಗಿ ಉಸಿರನ್ನು ಹೊರಕ್ಕೆ ಬಿಡಬೇಕು ಪೂರಕ ಮಾಡದೆ, ಗಾಳಿಯನ್ನು ತಡೆ ಹಿಡಿದು ಹೊಟ್ಟೆಯ ಭಾಗವನ್ನು ಹಿಂದಕ್ಕೆ ಬೆನ್ನು ಉರಿಯತ್ತ ತಳ್ಳಿ ಮೇಲಕ್ಕೆ ಎತ್ತಬೇಕು. ಉಡ್ಡಿಯಾನ ಬಂಧವು ಮಾಡುವಾಗ ಎದೆಯನ್ನು ಯಾವುದೇ ಕಾರಣಕ್ಕೂ ಕುಗ್ಗಿಸಕೂಡದು ಉದರ ಮತ್ತು ಮುಂಡಬಾಗದ ಬೆನ್ನುಹುರಿಯ ಮುಂದಕ್ಕೆ ಮೇಲಕ್ಕೆ ಹತ್ತಿ ಹೊಟ್ಟೆಯ ಭಾಗದ ಅಂಗಾಂಗಗಳನ್ನು ಬೆನ್ನು ಉರಿಯುತ್ತಾ ಶಿರಡಿ ಸುತ್ತಿಸಲು ಪ್ರಯತ್ನಿಸಬೇಕು. ಅವುಗಳ ತಲೆ ಒತ್ತಬೇಕು. ಆಗ ಇನ್ನು ಹೆಚ್ಚು ಎಳೆಯಲು ಅನುಕೂಲ. ಹಾಗೆಯೇ ಹೊಟ್ಟೆ ಬಿಗಿತ ಸಡಿಲಿಸದೆ ಗದ್ದವನ್ನು ಮೇಲೆತ್ತದೆಯೇ ಬೆನ್ನನ್ನು ನೇರ ಮಾಡಿ, ನಿಮ್ಮ ಕೈಲಾದಷ್ಟು ಸಮಯ (10 ರಿಂದ 15) ಸೆಕೆಂಡ್ ಉಸಿರನ್ನು ತಡೆಹಿಡಿಯಿರಿ. ಆದರೆ ಶಕ್ತಿ ಮೀರಿ ಉಸಿರು ತಡೆಹಿಡಿಯಬಾರದು ಈ ಸಮಯವನ್ನು ಪ್ರಮಾಣ ಹೆಚ್ಚಿಸುತ್ತಾ ಹೋಗಬೇಕು. ನಂತರ ಗದ್ದ ಮತ್ತು ತಲೆ ಅಳುಗಿಸದೆ ಹೊಟ್ಟೆ ಮಾಂಸಖಂಡಗಳನ್ನು ಮೊದಲು ಸಡಿಲಿಸಿ ನಂತರ ನಿಧಾನವಾಗಿ ಉಸಿರು ತೆಗೆದುಕೊಳ್ಳಬೇಕು.
ವಿಶೇಷ ಸೂಚನೆ :-
ಈ ಬಂಧನವನ್ನು ಯೋಗ್ಯ ಗುರುವಿನ ಅಥವಾ ಪರಿಣಿತರ ಮಾರ್ಗದರ್ಶನದಲ್ಲಿ ಮಾಡಿದರೆ ಒಳ್ಳೆಯದು. ದಿನಕ್ಕೊಮ್ಮೆ ಮಾತ್ರ 6 ರಿಂದ 8 ಆವೃತ್ತಿ ಕಾಲಿ ಹೊಟ್ಟೆಯಲ್ಲಿ ಅಂದರೆ ಬಾಹ್ಯ ಕುಂಭಕರ ಸ್ಥಿತಿಯಲ್ಲಿ ಮಾತ್ರ ಉಸಿರು ಹೊರ ಹಾಕುವವರಿಗೆ ಹೊಟ್ಟೆಯನ್ನು ಸುರುಳಿ ಸುತ್ತಬಾರದು ಮಾಡುವಾಗ ಕಪೋಲಾ ಭಾಗದಲ್ಲಿ ಹಿಡಿತ ಕಂಡುಬಂದರೆ ಅಥವಾ ಉಸಿರು ಎಳೆಯುವುದು ಕಷ್ಟವಾದರೆ, ಉಡ್ಡಿಯಾನ ಬಂದವನು ಶಕ್ತಿ ಮೀರಿಮಾಡಲಾಗಿದೆ. ಹೊಟ್ಟೆ ಅಂಗಾಂಗಗಳು ಎಂದಿನಂತೆ ವಿಶ್ರಮಿಸುವವರಿಗೆ ಉಸಿರು ತೆಗೆದುಕೊಳ್ಳಬಾರದು.
ಪರಿಣಾಮ :-
ಇದರಿಂದ ಮುಖ್ಯ ಪ್ರಾಣಶಕ್ತಿಯು ಮೇರು ದಂಡದಲ್ಲಿ ವಿರಾಜಿಸುವ ನರಗಳ ಶಕ್ತಿ ವಾಹಕದ ಸುಷ್ಮಾನಾಡಿಯ ಮೂಲಕ ಮೇಲಕ್ಕೆ ಹಾರುತ್ತವೆ ಎಂದು ಹೇಳಲಾಗುತ್ತದೆ. ಬಂಧನಗಳೆಲ್ಲ ಉತ್ಕೃಷ್ಟವೆನಿಸಿದ ಉಡ್ಡಿಯಾನ ಬಂಧವು ಮೈಗೂಡಿಸಿಕೊಂಡ ಸತತ ಅಭ್ಯಾಸಗಳು ನವತಾರುಣ್ಯ ಪಡೆಯುತ್ತಾರೆ. ಇದು ವಫೆ ಮತ್ತು ಹೊಟ್ಟೆ ಅಂಗಗಳಿಗೆ ವ್ಯಾಯಾಮ ನೀಡುತ್ತದೆ. ಹಾಗಾಗಿ ಪಂಚನಾಗ್ನಿವರ್ಧಕ. ವಪೆಯಲ್ಲಿ ಮೇಲೆತ್ತುವ ಕ್ರಿಯೆಯಿಂದಾಗಿ ಹೃದಯದ ಮಾಂಸ ಕಂಡಗಳನ್ನು ಮೃದುವಾಗಿಸಿದಂತಾಗುತ್ತದೆ. ಅಪಾನ ವಾಯುವು ಪ್ರಾಣವಾಯುವಿನೊಂದಿಗೆ ಬೆರೆತು ಆಹಾರಜೀರ್ಣವಾಗಲು ಶಕ್ತಿ ವಿತರಣೆಗೆ ಸಹಾಯಕವಾಗುತ್ತದೆ ಮತ್ತು ಜೀರ್ಣಾಂಗಗಳಲ್ಲಿನ ನಂಜು ಹೊರಹಾಕಲ್ಪಡುತ್ತದೆ. ಒಟ್ಟಾರೆ ಈ ಬಂಧನವನ್ನು “ಶಕ್ತಿಶಾಲ ಬಂಧ” ಎಂದು ಕರೆಯುತ್ತಾರೆ.
ಮುಂದುವರೆಯುತ್ತದೆ….