ಮನೆ ಸುದ್ದಿ ಜಾಲ ಅಡುಗೆ ಎಣ್ಣೆ ಲೀಟರ್ ಗೆ 50 ರೂ. ಏರಿಕೆ; ಖರೀದಿಗೆ ಮಿತಿ

ಅಡುಗೆ ಎಣ್ಣೆ ಲೀಟರ್ ಗೆ 50 ರೂ. ಏರಿಕೆ; ಖರೀದಿಗೆ ಮಿತಿ

0

ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಅಡುಗೆ ಎಣ್ಣೆ ದರ ಗಗನಕ್ಕೇರಿದೆ. ಸೂರ್ಯಕಾಂತಿ ಎಣ್ಣೆಯ ಕೃತಕ ಅಭಾವ ಸೃಷ್ಟಿಸಿದ ಪರಿಣಾಮ 1 ಲೀಟರ್ ಖಾದ್ಯತೈಲ 200 ರೂ. ಸಮೀಪಕ್ಕೆ ಬಂದಿದೆ.

ರಷ್ಯಾ -ಉಕ್ರೇನ್ ಯುದ್ಧದ ನಂತರ ಅಡುಗೆ ಎಣ್ಣೆ ದರ 50 ರೂ.ನಷ್ಟು ಹೆಚ್ಚಳವಾಗಿದೆ.

ಹೆಚ್ಚಿನ ಗ್ರಾಹಕರು ದರ ಹೆಚ್ಚಳದ ಆತಂಕದಿಂದಾಗಿ ಅಡುಗೆ ಎಣ್ಣೆ ಖರೀದಿಗೆ ಮುಗಿಬಿದ್ದಿರುವುದರಿಂದ ಅನೇಕ ಅಂಗಡಿ, ಮಾಲ್, ಸೂಪರ್ ಬಜಾರ್ ಗಳಲ್ಲಿ ಖರೀದಿಗೆ ಮಿತಿ ಹೇರಲಾಗಿದೆ.

ಸೂರ್ಯಕಾಂತಿ ಎಣ್ಣೆ ಮಾತ್ರವಲ್ಲದೆ ಇತರ ಖಾದ್ಯ ತೈಲ ದರ ಕೂಡ ಏರಿಕೆ ಕಂಡಿದೆ. ದೇಶದಲ್ಲಿ ಅಡುಗೆ ಎಣ್ಣೆಯ ಅಗತ್ಯ ದಾಸ್ತಾನು ಇದೆ. ಹೀಗಿದ್ದರೂ, ಕೆಲವರು ಪರಿಸ್ಥಿತಿ ಲಾಭ ಪಡೆದು ಕೃತಕ ಅಭಾವ ಸೃಷ್ಠಿಸಿ ದರ ಹೆಚ್ಚಳ ಮಾಡಿದ್ದಾರೆನ್ನಲಾಗಿದೆ.

ಹಿಂದಿನ ಲೇಖನರಷ್ಯಾ ಜೊತೆಗಿನ ಒಡಂಬಡಿಕೆ ಮರುಪರಿಶೀಲಿಸುವಂತೆ ಉಕ್ರೇನ್ ಸಂಸದ ಒತ್ತಾಯ
ಮುಂದಿನ ಲೇಖನಸಂಸದೆ ಸುಮಲತಾ ಅಂಬರೀಷ್ ಕಾರು ಚಾಲಕನಿಗೆ ಥಳಿತ